ಬೆಂಗಳೂರು | ಕಾರಿನ ಮೇಲೆ ಬಿದ್ದ ಬ್ಯಾರಿಕೇಡ್‍ಗಳು; ತಪ್ಪಿದ ಭಾರೀ ಅನಾಹುತ

Update: 2023-01-22 18:26 GMT

ಬೆಂಗಳೂರು, ಜ. 22: ಮೆಟ್ರೊ ನಿರ್ಮಾಣ ಕಾಮಗಾರಿನಡೆಯುತ್ತಿರುವ ದೊಡ್ಡನೆಕ್ಕುಂದಿ ಜಂಕ್ಷನ್‍ನಲ್ಲಿ ಬ್ಯಾರಿಕೇಡ್‍ಗಳು ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸ್ಪಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ದೊಡ್ಡನೆಕ್ಕುಂದಿಯಿಂದ ಮಹದೇವಪುರ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರವಿವಾರ ಇಬ್ಬರು ಕಾರಿನಲ್ಲಿಹೊರಟಿದ್ದರು. ಕಾರು ಚಲಿಸುತ್ತಿದ್ದ ಸಂದರ್ಭದಲ್ಲೇ ಬ್ಯಾರಿಕೇಡ್‍ಬಿದ್ದಿತ್ತು. ಸ್ವಲ್ಪದರಲ್ಲೇ ಕಾರು ಮುಂದಕ್ಕೆ ಚಲಿಸಿದ್ದರಿಂದ, ಕಾರು ಭಾಗಶಃ ಜಖಂಗೊಂಡಿದೆ. 

ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದವರಿಗೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು. ಕಾರಿನ ಮಾಲಕರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Similar News