ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ: ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ

ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಿಂದ ಭರವಸೆ

Update: 2023-02-01 14:34 GMT

ಕುಂದಾಪುರ: ಹುಂಚಾರುಬೆಟ್ಟುವಿನಲ್ಲಿ ನಿರ್ಮಿಸಲಾಗುತ್ತಿರುವ ಎಸ್‌ಟಿಪಿಗೆ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಕಾಮಗಾರಿಗೆ ಹಿನ್ನೆಡೆ ಆಗುತ್ತದೆ. ಈ ಬಗ್ಗೆ ಶಾಸಕರ ಜೊತೆ ಚರ್ಚಿಸಿ ಸ್ಥಳೀಯರ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಶಾಸಕರ ಉಪಸ್ಥಿತಿಯಲ್ಲಿ ವಿಶೇಷ ಸಭೆ ಕರೆದು ಎಸ್‌ಟಿಪಿ ಸಮಸ್ಯೆ ಪರಿಹರಿಸಲಾಗುವುದು ಎಂದು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ತಿಳಿಸಿದ್ದಾರೆ.

ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳ ವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿರೋಧ ಪಕ್ಷದ ನಾಯಕ ಚಂದ್ರಶೇಖರ ಖಾರ್ವಿ ಮಾತನಾಡಿ, ಒಳಚರಂಡಿ ಕಾಮಗಾರಿ ಕಳೆದ 10 ವರ್ಷಗಳಿಂದ ನಡೆಯುತ್ತಿದ್ದು, ಪ್ರತಿ ಸಭೆಯಲ್ಲಿ ಚರ್ಚೆ ನಡೆದರೂ ಸಾತ್ವಿಕ ಅಂತ್ಯ ಕಂಡಿಲ್ಲ. ಎಸ್‌ಟಿಪಿ ನಿರ್ಮಾಣಕ್ಕೆ ಜಾಗ ಗುರುತಿಸಿ, 2 ಕೋಟಿ ಹಣ ನೀಡಿದ ನಂತರ ವಿರೋಧಿಸುವುದು ಸರಿಯಲ್ಲ ಎಂದರು.

ಆಡಳಿತ ಪಕ್ಷದ ಸದಸ್ಯ ಶೇಖರ ಪೂಜಾರಿ ಮಾತನಾಡಿ, ಎಸ್‌ಟಿಪಿಗೆ ಹೊಸ ಜಗ ಗುರುತಿಸಲಾಗಿದೆ. ಹಿಂದೆ ಗುರುತಿಸಲಾದ ಜಾಗದಲ್ಲಿ ಎಸ್‌ಟಿಪಿ ನಿರ್ಮಾಣ ಮಾಡಲು ಜನರ ವಿರೊಧಿವಿದೆ. 150 ಫೀಟ್ ಮುಂದಕ್ಕೆ ಮಾಡು ವಂತೆ ಒತ್ತಯಿಸಿದ್ದಾರೆ ಎಂದರು. ನಾಮನಿರ್ದೇಶಕ ಸದಸ್ಯ ಪ್ರಕಾಶ್ ಖಾರ್ವಿ, ಆಡಳಿತ ವಿರೋಧಿ ಸದಸ್ಯರಾದ ಚಂದ್ರಶೇಖರ ಖಾರ್ವಿ, ದೇವಕಿ ಪಿ.ಸಣ್ಣಯ್ಯ, ಶ್ರೀಧರ ಶೇರೆಗಾರ್ ಮಾತನಾಡಿ, ಈಗಾಗಲೇ 2 ಕೋಟಿ ಹಣ ಕೊಟ್ಟು ಜಾಗ ವಿಕ್ರಸಿದ್ದು ಅದನ್ನ ಏನು ಮಾಡುವುದು. ಒಂದು ವಾರ್ಡ್‌ನವರು ವಿರೋಧಿಸಿದಕ್ಕೆ ಕೆಲಸ ನಿಲ್ಲಿಸುವುದು ಸರಿಯಲ್ಲ ಎಂದು ತಿಳಿಸಿದರು.

ಕಾಂಡ್ಲಾ ವನ ನಿಮಾಣದ ಬಗ್ಗೆ ಸಾಕಷ್ಟು ಮಾಹಿತಿ ಕೇಳಿದರೂ ಅರಣ್ಯ ಇಲಾಖೆ ನೀಡುತ್ತಿಲ್ಲ. ನದಿ ನಡುವೆ ಕಾಂಡ್ಲಾ ವನ ನಿರ್ಮಾಣ ಮಾಡಿದರೆ ಮೀನುಗಾರಿಕೆ ನಡೆಸಲು ಸಮಸ್ಯೆ ಆಗುತ್ತದೆ. ಕಾಂಡ್ಲಾ ಸಸಿ ನಾಟಿ ಮಾಡಲು ಮತ್ತೆ ಟೆಂಡರ್ ಕರೆದಿದ್ದು, ಅದರ ಸಂಪೂರ್ಣ ಮಾಹಿತಿ ನೀಡಿವಂತೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಕುಂದಾಪುರ ವಲಯ ಅರಣ್ಯಾಧಿಕರಿ ಕಿರಣ್ ಬಾಬು, ಕಾಂಡ್ಲಾ ನಾಶವಾದ ಜಾಗದಲ್ಲಿ ಸಸಿ ನಾಟಿ ಮಾಡುತ್ತಿದ್ದು, ನದಿ ನಡುವೆ ಮಾಡುವುದಿಲ್ಲ. ಹಸಿರು ಇಂದಿನ ಅವಶ್ಯಕತೆಯಾಗಿದ್ದು, ಕಾಂಡ್ಲಾ ಬೆಳಸಲು ಸರಕಾರದ ಆದೇಶ ಇದೆ. ಕಾಂಡ್ಲಾದಿಂದ ಮೀನು ಹಾಗೂ ಜಲಚರಕ್ಕೆ ಸಮಸ್ಯೆ ಆಗುವುದಿಲ್ಲ. ಈ ಬಗ್ಗೆ ಸರಕಾರಕ್ಕೆ ಬರೆಯಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಮುಖ್ಯಾಧಿಕಾರಿ ಮಂಜುನಾಥ ಆರ್. ಹಾಜರಿದ್ದರು.

Similar News