×
Ad

ಆಮ್ನೆಸ್ಟಿ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಿದ್ದ ಜಾರಿ ನಿರ್ದೇಶನಾಲಯದ 2018ರ ನೋಟಿಸ್‌ಅನ್ನು ವಜಾಗೊಳಿಸಿದ ಹೈಕೋರ್ಟ್

Update: 2023-02-25 15:44 IST

ಬೆಂಗಳೂರು: ವಿದೇಶ ವಿನಿಮಯ ನಿರ್ವಹಣೆ (ಫೆಮಾ) ಹಾಗೂ ಐಟಿ ಕಾಯಿದೆಗಳನ್ವಯ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ (Amnesty India) ಇದರ ಬ್ಯಾಂಕ್‌ ಖಾತೆಗಳನ್ನು ಬ್ಲಾಕ್‌ ಮಾಡಲು ಜಾರಿ ನಿರ್ದೇಶನಾಲಯ 2018 ರಲ್ಲಿ ನೀಡಿದ್ದ ನೋಟಿಸ್‌ ಒಂದನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ವಜಾಗೊಳಿಸಿದೆ.

ಜಾರಿ ನಿರ್ದೇಶನಾಲಯದ ನೋಟಿಸ್‌ ಕೇವಲ 60 ದಿನ ಊರ್ಜಿತದಲ್ಲಿರುತ್ತದೆ ಎಂದು ಹೇಳಿ ಅಕ್ಟೋಬರ್‌ 26, 2018 ರ ನೋಟಿಸ್‌ ಅನ್ನು ಹೈಕೋರ್ಟಿನ ಏಕಸದಸ್ಯ ಪೀಠ ವಜಾಗೊಳಿಸಿದೆ. ಜಾರಿ ನಿರ್ದೇಶನಾಲಯದ ಆದೇಶವನ್ನು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಮತ್ತು ಇಂಡಿಯನ್ಸ್‌ ಫಾರ್‌ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌  ಪ್ರಶ್ನಿಸಿ ಹೈಕೋರ್ಟ್‌ ಕದ ತಟ್ಟಿದ್ದವು.

ಈಡಿ ಆದೇಶವು ಕೇವಲ 60 ದಿನಗಳ ಕಾಲ ಊರ್ಜಿತದಲ್ಲಿರುತ್ತದೆ ಎಂಬುದಕ್ಕೆ ಅರ್ಜಿದಾರರ ಪರ ವಕೀಲರು ಗ್ರೀನ್‌ ಪೀಸ್‌ ಸೊಸೈಟಿ ವಿರುದ್ಧ ಕೈಗೊಳ್ಳಲಾಗಿದ್ದ ಇಂತಹುದೇ ಕ್ರಮವನ್ನು ನ್ಯಾಯಾಲಯ ವಜಗೊಳಿಸಿದ್ದನ್ನು ಉಲ್ಲೇಖಿಸಿದ್ದರು.

ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದ ಜಾರಿ ನಿರ್ದೇಶನಾಲಯ 2020 ರಲ್ಲಿ ಆಮ್ನೆಸ್ಟಿ ಇಂಡಿಯಾದ ಕಚೇರಿಗಳನ್ನು ಮುಚ್ಚಿತ್ತಲ್ಲದೆ ಅವುಗಳ ಬ್ಯಾಂಕ್‌ ಖಾತೆಗಳನ್ನೂ ಮುಟ್ಟುಗೋಲು ಹಾಕಿತ್ತು.

ಇದನ್ನೂ ಓದಿ: ಇಬ್ಬರು ಯುವಕರ ಹತ್ಯೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ನಡೆದ ಮಹಾಪಂಚಾಯತ್ ಬೆನ್ನಲ್ಲೇ‌ ಇನ್ನೆರಡು ದ್ವೇಷದ ದಾಳಿಗಳು

Similar News