×
Ad

ನನಗೆ ಉರಿಗೌಡನೂ ಗೊತ್ತಿಲ್ಲ, ನಂಜೇಗೌಡನೂ ಗೊತ್ತಿಲ್ಲ: ಸಚಿವ ಡಾ. ಕೆ. ಸುಧಾಕರ್

''ಈ ವಿಚಾರವನ್ನು ದೊಡ್ಡ ಸುದ್ದಿ ಮಾಡೋದು ಬೇಡ...''

Update: 2023-03-20 21:26 IST

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ: 'ನನಗೆ ಮಾಜಿ ಪ್ರಧಾನಿ ದೇವೇಗೌಡ ಗೊತ್ತಿದೆ. ಉರಿಗೌಡ ಮತ್ತು ನಂಜೇಗೌಡ ಯಾರು ಎಂದು ನನಗೆ ಗೊತ್ತೇ ಇಲ್ಲ' ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. 

ಉತ್ತರ ವಿವಿ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, 'ಇತಿಹಾಸದಲ್ಲಿ ಉರಿಗೌಡ ನಂಜೇಗೌಡ ಯಾರು ಎಂದು ನಾನು ಕೇಳಿಲ್ಲ. ನನಗೆ ಗೊತ್ತಿರುವವರ ಹೆಸರನ್ನು ಕೇಳಿದರೆ ನಾನು ಹೇಳ್ತೇನೆ. ಗೊತ್ತಿಲ್ಲದವರ ಬಗ್ಗೆ ಕೇಳಿದರೆ ನಾನು ಏನು ಮಾತಾಡಲಿ?' ಎಂದು ಹೇಳಿದರು. 

'ಈ ವಿಚಾರವನ್ನು ದೊಡ್ಡ ಸುದ್ದಿ ಮಾಡೋದು ಬೇಡ. ಚರಿತ್ರೆಯಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅವರಿಗೆ ಮಾನ್ಯತೆ ಸಿಗುತ್ತೆ . ಗೊತ್ತಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದಕ್ಕೆ ನಾನು ಹೋಗಲ್ಲ' ಎಂದು ಸಚಿವ ಸುಧಾಕರ್ ಹೇಳಿದರು.

ಇದನ್ನೂ ಓದಿ: ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಆಧಾರ್ ಕಾರ್ಡ್!

Similar News