ಆಧಾರ್, ವೋಟರ್ ಐಡಿ ಕಾರ್ಡ್ ಆಯ್ತು, ಈಗ ‘ಉರಿಗೌಡ-ನಂಜೇಗೌಡ’ ಮತ್ತೊಂದು ಪೋಸ್ಟರ್ ವೈರಲ್

Update: 2023-03-22 05:33 GMT

ಬೆಂಗಳೂರು, ಮಾ.21: ವಿವಾದಿತ ಉರಿಗೌಡ ಮತ್ತು ನಂಜೇಗೌಡ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ವ್ಯಂಗ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದ ಬೆನ್ನಲ್ಲೇ ಈ ‘ಕೈಲಾಸ ಸಮಾರಾಧನೆ’ ಪೋಸ್ಟರ್ ಒಂದು ವೈರಲ್ ಆಗಿದೆ.

ಕೈಲಾಸ ಸಮಾರಾಧನೆ ಫೋಟೋ ವೈರಲ್ ಆಗಿದ್ದು, ಈ ವೈರಲ್ ಫೋಟೋದಲ್ಲಿ ದಿವಂಗತ ಉರಿಗೌಡ ಮತ್ತು ನಂಜೇಗೌಡ, ಜನನ 2022, ಮರಣ 2023. ಬಿಜೆಪಿ ಕಪೋಕಲ್ಪಿತರಾದ ದಿವಂಗತ ಉರಿಗೌಡ ಮತ್ತು ನಂಜೇಗೌಡ ಅವರ ಕೈಲಾಸ ಸಮಾರಾಧನೆಯನ್ನು ಎ.1ರಂದು ಬಿಜೆಪಿ ಕಾರ್ಯಾಲಯ ಮಲ್ಲೇಶ್ವರಂನಲ್ಲಿ ಏರ್ಪಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೆ, ತಮ್ಮ ದುಃಖತಪ್ತರು ತಂದೆ ಸಿ.ಟಿ.ರವಿ, ತಾಯಿ ಅಶ್ವಥ್ ನಾರಾಯಣ, ಬಂಧು ಮಿತ್ರರಾದ ಆರ್. ಅಶೋಕ್, ಶೋಭಾ ಕರಂದ್ಲಾಜೆ, ಮುನಿರತ್ನ ಹಾಗೂ 2 ರೂಪಾಯಿ ಭಕ್ತರು ಎಂದು ಬರೆಯಲಾದ್ದು, ಸದ್ಯ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿಉರಿಗೌಡ, ನಂಜೇಗೌಡ ಹೆಸರಿನಲ್ಲಿ ಆಧಾರ್ ಕಾರ್ಡ್!

Similar News