ಮಣಿಪಾಲ: ಮಹಿಳೆಯ ಚಿನ್ನದ ಸರ ಸುಲಿಗೆ

Update: 2023-03-26 15:14 GMT

ಮಣಿಪಾಲ, ಮಾ.26: ಮನೆ ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಕತ್ತಿನಲ್ಲಿ ಸರವನ್ನು ಅಪರಿಚಿತರಿಬ್ಬರು ಸುಲಿಗೆ ಮಾಡಿರುವ ಘಟನೆ ಮಾ.25ರಂದು ಸಂಜೆ 6:30ರ ಸುಮಾರಿಗೆ ಪರ್ಕಳ ಬೊಬ್ಬರ್ಯ ದೇವಸ್ಥಾನದ ಹತ್ತಿರ ನಡೆದಿದೆ.

ಪರ್ಕಳ ಬೊಬ್ಬರ್ಯ ದೇವಸ್ಥಾನದ ಹತ್ತಿರದ ನಿವಾಸಿ ಶಾರಾದಾ ಪಾಟೀಲ್ (80) ಎಂಬವರು ತಮ್ಮ ಮನೆಯ ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದು, ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ಮನೆಯ ವಿಳಾಸ ಕೇಳುವ ನೆಪದಲ್ಲಿ ಶಾರಾದ ಅವರ ಹತ್ತಿರ ಬಂದರು. ಈ ವೇಳೆ ಓರ್ವ ವ್ಯಕ್ತಿಯ ಶಾರದಾ ಅವರ ಬಾಯಿಯನ್ನು ಕೈಯಿಂದ ಒತ್ತಿ ಹಿಡಿದ್ದು ಕೊರಳಲ್ಲಿದ್ದ ಚಿನ್ನ ಸರವನ್ನು ಕಿತ್ತುಕೊಂಡು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕಿನಲ್ಲಿ ಪರಾರಿಯಾಗಿರುವುದಾಗಿ ದೂರಲಾಗಿದೆ.

ಸುಲಿಗೆಯಾದ 6 ಪವನ್ ತೂಕದ ಚಿನ್ನದ ಸರ ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News