ಇಸ್ರೇಲ್: ರಾಷ್ಟ್ರವ್ಯಾಪಿ ಪ್ರತಿಭಟನೆ; 1 ಲಕ್ಷಕ್ಕೂ ಅಧಿಕ ಜನರು ಭಾಗಿ‌

Update: 2023-04-02 17:45 GMT

ಟೆಲ್ಅವೀವ್, ಎ.2: ನ್ಯಾಯಾಂಗದಲ್ಲಿ ಪರಿಷ್ಕರಣೆ ನಡೆಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಧಾರವನ್ನು ವಿರೋಧಿಸಿ ದೇಶದಾದ್ಯಂತ ತೀವ್ರ ಪ್ರತಿಭಟನೆ ಮುಂದುವರಿದಿದ್ದು ಶನಿವಾರ ಸುಮಾರು 1,50,000 ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದಾಗಿ ವರದಿಯಾಗಿದೆ. 

ಜನರಿಂದ ನಿರೀಕ್ಷೆಗೂ ಮೀರಿದ ವಿರೋಧ ವ್ಯಕ್ತವಾಗಿರುವುದರಿಂದ ಮತ್ತು ಅಮೆರಿಕವೂ ಈ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿರುವುದರಿಂದ ತೀವ್ರ ಒತ್ತಡಕ್ಕೆ ಒಳಗಾಗಿರುವ ನೆತನ್ಯಾಹು, ನ್ಯಾಯಾಂಗ ಸುಧಾರಣೆ ಕಾನೂನು ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ಘೋಷಿಸಿದ್ದಾರೆ.

ಆದರೆ ನೆತನ್ಯಾಹು ಹೇಳಿಕೆಯ ಮೇಲೆ ತಮಗೆ ವಿಶ್ವಾಸವಿಲ್ಲ. ಇದೊಂದು ರಾಜಕೀಯ ಸ್ಟಂಟ್ ಆಗಿದ್ದು ಪ್ರತಿಭಟನೆಯನ್ನು ಅಂತ್ಯಗೊಳಿಸಲು ಅವರು ಈ ನಾಟಕ ಆಡುತ್ತಿದ್ದಾರೆ. ಆದರೆ ಕಾನೂನು ರದ್ದಾಗುವವರೆಗೂ ತಮ್ಮ ಹೋರಾಟ ನಿಲ್ಲದು  ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. 

Similar News