ಹಜ್ ಯಾತ್ರೆಗೆ ಮುಂಗಡ ಪಾವತಿಸಲು ಅವಧಿ ವಿಸ್ತರಣೆ

Update: 2023-04-04 14:18 GMT

ಬೆಂಗಳೂರು, ಎ.4: ‘ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಗಳು ಮುಂಗಡವಾಗಿ 81 ಸಾವಿರ ರೂ.ಗಳನ್ನು ಪಾವತಿಸಲು ಎ.7ರ ವರೆಗೆ ಇದ್ದ ಅವಧಿಯನ್ನು ಎ.12ರ ವರೆಗೆ ವಿಸ್ತರಿಸಲಾಗಿದೆ’ ಎಂದು ಭಾರತೀಯ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಯಾಕೂಬ್ ಶೇಖ್ ತಿಳಿಸಿದ್ದಾರೆ.

ಮುಂಗಡ ಹಣ ಪಾವತಿಸಿದ ಬಳಿಕ ಯಾತ್ರಿಗಳು ತಮ್ಮ ಪೇ ಇನ್ ಸ್ಲಿಪ್, ಹಜ್ ಯಾತ್ರೆಯ ಅರ್ಜಿ, ಸ್ವಯಂ ದೃಢೀಕರಣ ಪತ್ರ ಹಾಗೂ ವೈದ್ಯಕೀಯ ಪರೀಕ್ಷಾ ಪ್ರಮಾಣ ಪತ್ರ, ಮೂಲ ಪಾಸ್‍ಪೋರ್ಟ್ ಅನ್ನು ಸಂಬಂಧಪಟ್ಟ ರಾಜ್ಯ ಹಜ್ ಸಮಿತಿಗಳಿಗೆ ಎ.14ರ ಒಳಗಾಗಿ ಸಲ್ಲಿಸುವಂತೆ ಅವರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಹಜ್ ಯಾತ್ರಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಈ ಹಿಂದೆ 'ವಾರ್ತಾ ಭಾರತಿ'ಯು ವರದಿ ಪ್ರಕಟಿಸಿತ್ತು. 

ಇದನ್ನೂ ಓದಿಬ್ಯಾಂಕಿನ ರಜೆ ಬಗ್ಗೆ ಹಜ್ ಯಾತ್ರಿಗಳು ಆತಂಕ ಪಡುವ ಅಗತ್ಯವಿಲ್ಲ: ಸ್ಪಷ್ಟನೆ ನೀಡಿದ ಅಧಿಕಾರಿ 

Similar News