×
Ad

ನೀವು ಬಿಟ್ಟರೂ ನಿಮ್ಮನ್ನು ಬಿಡದೇ ಹಿಂಬಾಲಿಸುತ್ತಿದೆ: '40% ಆಫರ್' ಫೋಟೊ ಹಂಚಿಕೊಂಡು ಮೋದಿ ಕಾಲೆಳೆದ ಸಿದ್ದರಾಮಯ್ಯ

Update: 2023-05-06 16:25 IST

ಬೆಂಗಳೂರು:  ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಸೋಮೇಶ್ವರ ಭವನದಿಂದ ಆರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು. 

ಮೋದಿ ಅವರು ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಅವರ ಹಿಂಭಾಗದಲ್ಲಿರುವ ಮಳಿಗೆಯೊಂದರಲ್ಲಿ ಹಾಕಿದ್ದ '40% ಆಫರ್'  ಬೋರ್ಡ್ ಫೋಟೊ ಹಂಚಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ,  "ನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ ಮೋದಿಜೀ........'' ಎಂದು ಕಾಲೆಳೆದಿದ್ದಾರೆ.

ಇನ್ನು ''ಮೋದಿ ಹೋದಲ್ಲೆಲ್ಲಾ 40% ನಂಟು ಬಿಡಲಾರದು! ಇದು ಕಾಕತಾಳೀಯವೋ, ಸಾಂಕೇತಿಕವೋ'' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. 

ಇದನ್ನೂ ಓದಿಮೈಸೂರು: ಕಾಂಗ್ರೆಸ್‌ನಿಂದ ಬೊಮ್ಮಾಯಿ ಭಾವಚಿತ್ರದ ಪ್ರತಿಕೃತಿ ದಹಿಸಿ ‘ಶೇ 40 ಭ್ರಷ್ಟಾಸುರ ಸರ್ಕಾರ’ ಸಂಹಾರ

Full View

Similar News