ಮೈಸೂರು: ಕಾಂಗ್ರೆಸ್‌ನಿಂದ ಬೊಮ್ಮಾಯಿ ಭಾವಚಿತ್ರದ ಪ್ರತಿಕೃತಿ ದಹಿಸಿ ‘ಶೇ 40 ಭ್ರಷ್ಟಾಸುರ ಸರ್ಕಾರ’ ಸಂಹಾರ
ಸಿದ್ದರಾಮಯ್ಯ, ಡಿಕೆಶಿ, ರಣದೀಪ್ ಸಿಂಗ್ ಸುರ್ಜೇವಾಲಾ ಭಾಗಿ

ಮೈಸೂರು: ರಾಜ್ಯದಲ್ಲಿರುವ ಶೇ.40 ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಇರುವ ರಾಕ್ಷಸ ಆಕಾರದ ಪ್ರತಿಕೃತಿಯನ್ನು ದಹಿಸಿ ಸಂಹಾರ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಟಿ.ನರಸೀಪುರ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಶೇ.40 ಭ್ರಷ್ಟಾಚಾರದಲ್ಲಿ ತೊಡಗಿದ್ದು ಇದನ್ನು ತೊಲಗಿಸಿ ಎಂದು ನಲವತ್ತು ಪರ್ಸೆಂಟ್ ಭ್ರಷ್ಟಾಸುರ ಸಂಹಾರ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರದ ರಾಕ್ಷಸನ ಪ್ರತಿಕೃತಿ ನಿರ್ಮಿಸಿ ಅಲ್ಲಿಗೆ ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಬಿಲ್ಲಿನಲ್ಲಿ ಹೊಡೆಯುವ ಅಣಕು ಪ್ರದರ್ಶನ ನಡೆಸಿ ದಹಿಸಿ ಸಂಹಾರ ಮಾಡಿದರು.
ಇದೇ ವೇಳೆ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ: ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆಯಲ್ಲಿ ಭರವಸೆ!












