ಇಂದಿನಿಂದ ತಮಿಳುನಾಡು ಮಲ್ಟಿಪ್ಲೆಕ್ಸ್‌ ಗಳಲ್ಲಿ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು

Update: 2023-05-07 10:44 GMT

ಚೆನ್ನೈ: ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಚಿತ್ರಕ್ಕೆ ಕಳಪೆ ಪ್ರತಿಕ್ರಿಯೆ ದೊರೆಯುತ್ತಿದೆ ಎಂಬ ಕಾರಣಗಳನ್ನು ನೀಡಿ ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳು ಇಂದಿನಿಂದ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುತ್ತಿವೆ ಎಂದು indiatoday.in ವರದಿ ಮಾಡಿದೆ.

'ದಿ ಕೇರಳ ಸ್ಟೋರಿ' ಚಿತ್ರ ಬಿಡುಗಡೆಯ ವಿರುದ್ಧ ತಮಿಳುನಾಡಿನ 'ನಾಮ್ ತಮಿಳರ್ ಕಚ್ಚಿ' ಪಕ್ಷವು ಶನಿವಾರ ಪ್ರತಿಭಟನೆ ನಡೆಸಿತು. ಚಿತ್ರದ ವಿರುದ್ಧ 'ನಾಮ್ ತಮಿಳರ್ ಕಚ್ಚಿ' ಪಕ್ಷದ ಸಂಘಟಕ, ನಟ ಹಾಗೂ ನಿರ್ದೇಶಕ ಸೀಮನ್ ನೇತೃತ್ವದಲ್ಲಿ ಆ ಪಕ್ಷದ ಕಾರ್ಯಕರ್ತರು ಚೆನ್ನೈ ಅಣ್ಣಾ ನಗರ ಪ್ರವೇಶ ದ್ವಾರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.

'ದಿ ಕೇರಳ ಸ್ಟೋರಿ' ಚಿತ್ರ ತಂಡವು ಚಿತ್ರದ ಬಿಡುಗಡೆಗೂ ಮುನ್ನ ಕೇರಳದ 32,000 ಯುವತಿಯರನ್ನು ಬಲವಂತವಾಗಿ ಮತಾಂತರಿಸಿ, ನಂತರ ಉಗ್ರ ಸಂಘಟನೆಯಾದ ಐಸಿಸ್‌ಗೆ ಸೇರ್ಪಡೆ ಮಾಡಲಾಗಿದೆ ಎಂದು ತನ್ನ ಟೀಸರ್‌ನಲ್ಲಿ ಪ್ರತಿಪಾದಿಸಿದ್ದರಿಂದ ವಿವಾದ ಭುಗಿಲೆದ್ದಿದೆ.

ಈ ನಡುವೆ, ಚಿತ್ರದ ನಿರ್ಮಾಪಕರು, ವಿವಾದಾತ್ಮಕ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.

Similar News