Bengaluru | ಮೃತದೇಹ ಹೊರತೆಗೆಯಲು ಬಂದ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಮೃತ್ಯು
ಬೆಂಗಳೂರು : ಮೃತದೇಹ ತೆಗೆಯಲು ಪೊಲೀಸರಿಗೆ ನೆರವಾಗಲು ಬಂದಿದ್ದ ವ್ಯಕ್ತಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತದೇಹ ಹುಡುಕಲು ಬಂದಿದ್ದ ವ್ಯಕ್ತಿಯ ಮೃತದೇಹ ಸೇರಿ ಈಗ ಅಗ್ನಿಶಾಮಕ ಸಿಬ್ಬಂದಿ ಎರಡು ಮೃತದೇಹವನ್ನು ಹಡುಕಾಟ ನಡೆಸುತ್ತಿದ್ದಾರೆ.
ಸರ್ಜಾಪುರ ಬಳಿಯ ದಕ್ಷಿಣ ಪಿನಾಕಿನಿ ನದಿಯಲ್ಲಿ ಕವಿತಾ ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸರ್ಜಾಪುರ ಪೊಲೀಸರು ಕವಿತಾ ಮೃತದೇಹ ಹುಡುಕಾಟ ಮಾಡಲು ನದಿಗೆ ಮಾಲೂರು ಮೂಲದ ಮಂಜುನಾಥ್ ಎಂಬುವರನ್ನು ಇಳಿಸಿದ್ದರು ಎಂದು ತಿಳಿದು ಬಂದಿದೆ.
ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ನೀರಿಗೆ ಇಳಿದಿದ್ದ ಮಂಜುನಾಥ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸದ್ಯ ಇಬ್ಬರ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಮಂಜುನಾಥ್ ಪೋಷಕರು, ʼಪೊಲೀಸರ ನಿರ್ಲಕ್ಷ್ಯಕ್ಕೆ ತಮ್ಮ ಮಗನ ಪ್ರಾಣ ಹೋಗಿದೆʼ ಎಂದು ಆರೋಪ ಮಾಡಿದ್ದಾರೆ.