×
Ad

ಕೃತಿ ಕೆ.ಕಾರಂತಗೆ ರೋಲೆಕ್ಸ್ ನ್ಯಾಷನಲ್ ಜಿಯೋಗ್ರಾಫಿಕ್ ‘ಎಕ್ಸೆಲರ್ ಆಫ್ ದಿ ಇಯರ್ ಪ್ರಶಸ್ತಿ’

Update: 2026-05-10 00:07 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ನಗರದ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃತಿ ಕೆ. ಕಾರಂತ ಅವರು 2026ನೇ ಸಾಲಿನ ರೋಲೆಕ್ಸ್ ನ್ಯಾಷನಲ್ ಜಿಯೋಗ್ರಾಫಿಕ್ ‘ಎಕ್ಸೆಲರ್ ಆಫ್ ದಿ ಇಯರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಕುರಿತು ಸೆಂಟರ್ ಫಾರ್ ವೈಲ್ಡ್‌ಲೈಫ್ ಪ್ರಕಟಣೆ ನೀಡಿದ್ದು, ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಮತ್ತು ರೋಲೆಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೊದಲ ಬಾರಿಗೆ ದಕ್ಷಿಣ ಏಷ್ಯಾದ ಮಹಿಳಾ ಪರಿಸರ ಅನ್ವೇಷಕಿಯೊಬ್ಬರಿಗೆ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದೆ.

ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯಲಿರುವ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ವಾರ್ಷಿಕ ‘ಎಕ್ಸೆಲರ್ಸ್ ಫೆಸ್ಟಿವಲ್’ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಕೃತಿ ಕೆ.ಕಾರಂತ್ ಅವರಿಗೆ ಈ ಹಿಂದೆ ರೋಲೆಕ್ಸ್ ಅವಾರ್ಡ್ ಫಾರ್ ಎಂಟರ್‌ಪ್ರೈಸ್ (2019), ಮೆಕ್ನಲ್ವಿ ಪ್ರಶಸ್ತಿ (2025) ಮತ್ತು ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿ ಪ್ರಶಸ್ತಿ (2026) ದೊರೆತಿವೆ ಎಂದು ಸೆಂಟರ್ ಫಾರ್ ವೈಲ್ಡ್‌ಲೈಫ್ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News