ಹುರೂನ್ ಇಂಡಿಯಾ ‘ಚೀತಾ’ ಸೂಚ್ಯಂಕದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ : ಪ್ರಿಯಾಂಕ್ ಖರ್ಗೆ
ಬೆಂಗಳೂರು : 2026ರ ಎಎಸ್‍ಕೆ ಪ್ರೈವೇಟ್ ವೆಲ್ತ್ ಹುರೂನ್ ಇಂಡಿಯಾ ‘ಚೀತಾ’ ಸೂಚ್ಯಂಕದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದು, ಒಟ್ಟು 110 ನವೋದ್ಯಮಗಳಲ್ಲಿ 36 ನವೋದ್ಯಮಗಳು ಬೆಂಗಳೂರಿನಲ್ಲಿ ನೆಲೆಯೂರಿವೆ ಎಂದು ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಎನ್‍ಸಿಆರ್ 25 ಮತ್ತು ಮುಂಬೈ 16 ನವೋದ್ಯಮಗಳೊಂದಿಗೆ ಬೆಂಗಳೂರಿನ ನಂತರದ ಸ್ಥಾನ ಪಡೆದಿವೆ. 2021ರಲ್ಲಿ 54 ಇದ್ದ ‘ಚೀತಾ’ ನವೋದ್ಯಮಗಳ ಸಂಖ್ಯೆ 2026ರಲ್ಲಿ 110ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.
‘ಚೀತಾ’ ಎಂದರೆ ಷೇರುಪೇಟೆಯಲ್ಲಿ ನೋಂದಣಿಯಾಗದ, 20ರಿಂದ 50 ಕೋಟಿ ಅಮೆರಿಕನ್ ಡಾಲರ್ ಮೌಲ್ಯ ಹೊಂದಿರುವ ಹಾಗೂ ಮುಂದಿನ ಐದು ವರ್ಷಗಳಲ್ಲಿ ಯೂನಿಕಾರ್ನ್ ಆಗುವ ಸಾಮಥ್ರ್ಯ ಹೊಂದಿರುವ ನವೋದ್ಯಮಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ನವೋದ್ಯಮ ಪರಿಸರದ ವೈವಿಧ್ಯತೆ ಮತ್ತು ಬೆಳವಣಿಗೆಗೆ ಈ ಸಾಧನೆ ಸಾಕ್ಷಿಯಾಗಿದೆ. ಹಣಕಾಸು ತಂತ್ರಜ್ಞಾನ, ಸಾಫ್ಟ್ ವೇರ್ ಸೇವೆಗಳು, ಕೃತಕ ಬುದ್ಧಿಮತ್ತೆ, ಅಂತರಿಕ್ಷ ಮತ್ತು ರಕ್ಷಣಾ ತಂತ್ರಜ್ಞಾನ, ವಿದ್ಯುತ್ ಚಾಲಿತ ಸಾರಿಗೆ, ಆರೋಗ್ಯ ತಂತ್ರಜ್ಞಾನ ಹಾಗೂ ಗ್ರಾಹಕ ಉತ್ಪನ್ನಗಳಂತಹ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರಿನ ನವೋದ್ಯಮಗಳು ಮುಂಚೂಣಿಯಲ್ಲಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Bengaluru leads the 2026 ASK Private Wealth Hurun India Cheetah Index with 36 startups out of 110, ahead of NCR (25) and Mumbai (16).
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 14, 2026
A Cheetah is an unlisted startup valued between $200 million and $500 million, identified as having the potential to become a unicorn within five… pic.twitter.com/z0BfVz4GVr