ಬೆಂಗಳೂರು ನಗರ ಚೀಫ್ ಪೊಲೀಸ್ ಕಮಿಷನರ್ ಆಗಿ ಆರ್.ಹಿತೇಂದ್ರ ನೇಮಕ
ಬೆಂಗಳೂರನ್ನು ಐದು ಕಮಿಷನರೇಟ್ ಆಗಿ ಮಾಡಿದ ಸರಕಾರ
ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಪೊಲೀಸ್ ಆಯಕ್ತರಾಗಿ ಆರ್.ಹಿತೇಂದ್ರರನ್ನು ನಿಯೋಜಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
1996ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಐಪಿಎಸ್ (IPS) ಅಧಿಕಾರಿಯಾಗಿರುವ ಆರ್.ಹಿತೇಂದ್ರರನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಚೀಫ್ ಪೊಲೀಸ್ ಕಮಿಷನರ್ ಆಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಲಾಗಿದೆ.
ಬೆಂಗಳೂರಿಗೆ ಐದು ಪೊಲೀಸ್ ಕಮಿಷನರ್ ಗಳು
ಇನ್ನೂ ಈ ಹಿಂದೆ ನಿರ್ಧರಿಸಿದಂತೆ ಬೆಂಗಳೂರು ನಗರವನ್ನ ಐದು ಕಮಿಷನರೇಟ್ ವ್ಯಾಪ್ತಿಗಳನ್ನಾಗಿ ಮಾಡಿದ್ದು ನೂತನವಾಗಿ ಐದು ಕಮಿಷನರ್ ಗಳ ನೇಮಕ ಮಾಡಲಾಗಿದೆ.
ಆರ್.ಹೀತೆಂದ್ರ ಐದು ಕಮಿಷನರೇಟ್ ವಿಭಾಗಗಳಿಗೆ ಚೀಫ್ ಕಮೀಷನರ್ ಆಗಿರಲಿದ್ದಾರೆ. ಉಳಿದಂತೆ
ಲಾಬೂ ರಾಮ್ - ಕೇಂದ್ರ ವಲಯ ಪೊಲೀಸ್ ಕಮಿಷನರ್ ,
ಡಾ.ಪಿಎಸ್.ಹರ್ಷ - ಪೂರ್ವ ವಲಯ ಪೊಲೀಸ್ ಕಮಿಷನರ್
ವಿಕಾಸ್ ಕುಮಾರ್ ವಿಕಾಸ್ - ಪಶ್ಚಿಮ ವಲಯ ಪೊಲೀಸ್ ಕಮಿಷನರ್
ಡಾ,ಎಂ.ಬಿ. ಬೋರಲಿಂಗಯ್ಯ - ಉತ್ತರ ವಲಯ ಪೊಲೀಸ್ ಕಮಿಷನರ್
ಸಿ.ವಂಶಿಕೃಷ್ಣ - ದಕ್ಷಿಣ ವಲಯ ಪೊಲೀಸ್ ಕಮಿಷನರ್