ಮೇ 18ರಿಂದ ಎಸೆಸೆಲ್ಸಿ ಪರೀಕ್ಷೆ-2
ಸಾಂದರ್ಭಿಕ ಚಿತ್ರ | Image by rawpixel.com on Magnific
ಬೆಂಗಳೂರು, ಮೇ 8: 2025-26ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-2ನ್ನು ಮೇ 18ರಿಂದ ಮೇ 25 ರವರೆಗೆ ರಾಜ್ಯಾದ್ಯಂತ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತೀರ್ಮಾನಿಸಿದೆ.
ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆ-2 ಪರೀಕ್ಷೆಯಲ್ಲಿ 1,14,444 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 358 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಪರೀಕ್ಷೆ-2ನ್ನು ಹಿಂದಿನ ವರ್ಷಗಳಂತೆ ವ್ಯತ್ಯಸ್ಥಿತವಾಗಿ ಮತ್ತು ಪಾರದರ್ಶಕತೆಯಿಂದ ನಡೆಸಲಾಗುವುದು.
ಪರೀಕ್ಷಾ ಪೂರ್ವದಲ್ಲಿ ಹಾಗೂ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಸಂಬಂಧಿತ ವದಂತಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದು. ಪರೀಕ್ಷಾ ಸಮಯದಲ್ಲಿ ವಿಶೇಷವಾಗಿ ಕೆಲವು ಕೋಚಿಂಗ್, ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಸೈಬರ್ ಕೇಂದ್ರಗಳು. ಝೆರಾಕ್ಸ್ ಅಂಗಡಿಗಳು ಇತ್ಯಾದಿಯವರಿಂದ ಸುಳ್ಳು ವದಂತಿಗಳು ಹರಡಲು ಅವಕಾಶ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
ಪರೀಕ್ಷಾ ಕೇಂದ್ರಗಳ ಸಮೀಪ ಪರೀಕ್ಷಾ ಅಕ್ರಮಗಳಿಗೆ ಪ್ರಚೋದಿಸುವವರ ವಿರುದ್ಧ ಆಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.