×
Ad

ಸಂಡೂರು | ಹುಲಿಕುಂಟೆ ಸರ್ಕಾರಿ ಶಾಲೆಯಲ್ಲಿ ಮುಖ್ಯಗುರು ಆಂಜನೇಯ ಅವರಿಗೆ ಬೀಳ್ಕೊಡುಗೆ

Update: 2026-06-01 20:24 IST

ಸಂಡೂರು/ ಬಳ್ಳಾರಿ: ತಾಲೂಕಿನ 73 ಹುಲಿಕುಂಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ಬಡ್ತಿ ಹೊಂದಿ ವಯೋನಿವೃತ್ತಿ ಹೊಂದಿದ ಮುಖ್ಯಗುರು ಶ್ರೀ ಆಂಜನೇಯ ಅವರ ಬೀಳ್ಕೊಡುಗೆ ಸಮಾರಂಭವು ನಡೆಯಿತು.

ಹೊಸ ಶೈಕ್ಷಣಿಕ ವರ್ಷದ ಆರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲೆಯ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕ-ಪೋಷಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಹೋದ್ಯೋಗಿಗಳಾದ ಯರ್ರಿಸ್ವಾಮಿ, ಸಿದ್ದರಾಮಯ್ಯ, ಸೋಮಶೇಖರ್, ಸಿ.ಆರ್.ಪಿ ಎಂ. ನಾಗರಾಜ್, ಬಿ.ಎಂ. ಶಶಿಧರ್ ಹಾಗೂ ಕಿಶೋರ್ ಅವರು ಶ್ರೀ ಆಂಜನೇಯ ಅವರೊಂದಿಗೆ ಕಳೆದ ಸೇವಾ ದಿನಗಳನ್ನು ಸ್ಮರಿಸಿ, ಅವರ ಸರಳ ವ್ಯಕ್ತಿತ್ವ, ವಿದ್ಯಾರ್ಥಿ ಸ್ನೇಹಿ ಮನೋಭಾವ ಮತ್ತು ಕರ್ತವ್ಯನಿಷ್ಠೆಯನ್ನು ಕೊಂಡಾಡಿದರು.

ಗ್ರಾಮದ ಮುಖಂಡರಾದ ಕರಿಯಪ್ಪ, ಮರಿಸ್ವಾಮಿ ಸೇರಿದಂತೆ ಗ್ರಾಮದ ಹಿರಿಯರು, ಹಳೆಯ ವಿದ್ಯಾರ್ಥಿಗಳು, ಪಾಲಕ-ಪೋಷಕರು ಹಾಗೂ ಶಿಕ್ಷಕರು ಶ್ರೀ ಆಂಜನೇಯ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು. ಈ ವೇಳೆ ಹಲವು ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನದಿಂದ ಜೀವನದಲ್ಲಿ ಸಾಧಿಸಿರುವ ಯಶಸ್ಸಿನ ಕುರಿತು ಮಾತನಾಡಿ ಕೃತಜ್ಞತೆ ವ್ಯಕ್ತಪಡಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News