×
Ad

ಬೀದರ್‌ | ನ್ಯಾಯಾಲಯ, ತಹಶೀಲ್ದಾರ್‌ ಕಚೇರಿಗೆ ಹುಸಿ ಬಾಂಬ್‌ ಬೆದರಿಕೆ

Update: 2026-06-27 19:38 IST

ಬೀದರ್‌ : ಜಿಲ್ಲಾ ನ್ಯಾಯಾಲಯ ಹಾಗೂ  ತಹಶೀಲ್ದಾರ್‌ ಕಚೇರಿಗೆ ಶನಿವಾರ ಬಾಂಬ್‌ ಬೆದರಿಕೆಯ ಸಂದೇಶ ಬಂದಿದ್ದು, ಪೊಲೀಸರು ತಪಾಸಣೆ ನಡೆಸಿದರು.

ಬೆದರಿಕೆ ಸಂದೇಶದ ಹಿನ್ನೆಲೆ ಪೊಲೀಸರು, ಶ್ವಾನ ದಳ ಮತ್ತು ಬಾಂಬ್‌ ನಿಷ್ಕ್ರಿಯ ದಳದವರು ನ್ಯಾಯಾಲಯ ಹಾಗೂ ತಹಶೀಲ್ದಾರ್‌ ಕಚೇರಿಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಬಳಿಕ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. 

ಇದೇ ರೀತಿಯಲ್ಲಿ ಕೆಲ ದಿನಗಳ ಹಿಂದೆ ಗುರುದ್ವಾರಕ್ಕೂ ಕೂಡ ಹುಸಿ ಬಾಂಬ್ ಬೆದರಿಕೆ ಬಂದಿತ್ತು ಎಂದು ತಿಳಿದು ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News