×
Ad

Bidar | ಜು.15 ರಂದು ವಿದ್ಯುತ್ ವ್ಯತ್ಯಯ

Update: 2026-07-14 18:13 IST

ಬೀದರ್‌ : ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ನಿಯಮಿತ ಬಸವಕಲ್ಯಾಣ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ 110 ಕೆ.ವಿ ಮಂಠಾಳ್ ಹಾಗೂ ಸಸ್ತಾಪುರ್ ವಿದ್ಯುತ್ ಉಪ-ಕೇಂದ್ರದಿಂದ ತುರ್ತು ಕೆಲಸದ ಪ್ರಯುಕ್ತ ಜು.15ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹುಮನಾಬಾದ್‌ ತಾಲೂಕಿನ ಜೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು 33 ಕೆ.ವಿ. ಬಸವಕಲ್ಯಾಣ, 33ಕೆ.ವಿ. ಮುಚಳಂಬ, 33ಕೆ.ವಿ. ಮುಡಬಿ, 33ಕೆ.ವಿ. ಭೋಸ್ಗಾ, ಮೋರಖಂಡಿ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11 ಕೆ.ವಿ ನಾರಾಯಣಪುರ್‌, 11 ಕೆ.ವಿ ಪರ್ತಾಪುರ್, 11ಕೆ.ವಿ ಸಸ್ತಾಪುರ್, 11ಕೆ.ವಿ ಸೀತಾ ಕಾಲೋನಿ, 11ಕೆ.ವಿ ತ್ರಿಪೂರಾಂತ್, 11ಕೆ.ವಿ ಚುಲ್ಕಿನಾಳ, 11ಕೆ.ವಿ ಖಾಂಡಸರಿ, 11 ಕೆ.ವಿ. ಕೈಕಾರಿಕಾ ಹಾಗೂ 11ಕೆ.ವಿ. ಮಂಠಾಳ್, ನಿಲಕಂಠವಾಡಿ, ಜಾಫರವಾಡಿ, ಗುಂಡೂರ್, ಚಿಟ್ಟಾ (ಕೆ), ಖಾನಾಪುರ್‌, ಉಜಲಂಬ ಮತ್ತು ಘೋಟಾಳ್ ಮಾರ್ಗದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ, ಗ್ರಾಹಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News