ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಾಲ್ಕಿ ತಾಲೂಕು ಪದಾಧಿಕಾರಿಗಳ ಆಯ್ಕೆ
Update: 2026-05-23 18:59 IST
ಭಾಲ್ಕಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಾಲ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ಬಸವರಾಜ ದಾನಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನೂತನ ಪದಾಧಿಕಾರಿಗಳಾಗಿ ನಿರ್ಮಲಾ ಚೆಲ್ವಾ ಹಾಗೂ ಸುಧಾಕರ ಗಾಯಕವಾಡ್ ಉಪಾಧ್ಯಕ್ಷರಾಗಿ, ರಾಮರಾವ್ ಬಾನಾ ಪ್ರಧಾನ ಕಾರ್ಯದರ್ಶಿಯಾಗಿ, ಸತ್ಯವಾನ್ ಕಾಂಬಳೆ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಅನೀತಾ ಎಸ್. ಮುಧಾಳೆ ಸಹಕಾರ್ಯದರ್ಶಿ (ಮಹಿಳೆ), ದತ್ತು ಮುಧಾಳೆ ಸಹಕಾರ್ಯದರ್ಶಿ (ಸಾಮಾನ್ಯ), ಅನ್ನಪೂರ್ಣ ಡಿ. ಮೇತ್ರೆ ಸಂಘಟನಾ ಕಾರ್ಯದರ್ಶಿ (ಮಹಿಳೆ) ಹಾಗೂ ರತ್ನಮ್ಮಾ ಹಾಲಕುಡೆ ಸಂಘಟನಾ ಕಾರ್ಯದರ್ಶಿ (ಸಾಮಾನ್ಯ) ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎಸ್. ಪಾಟೀಲ್ ತಿಳಿಸಿದ್ದಾರೆ.