ನಾವು ಬ್ರಿಟನ್ ಸೇರಿ ಅನೇಕ ದೇಶಗಳನ್ನು ಹಿಂದಿಕ್ಕಿ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ : ಜೆ.ಪಿ.ನಡ್ಡಾ

Update: 2024-04-27 16:29 GMT

Photo: PTI

ಬೀದರ್: ನಾವು ಬ್ರಿಟನ್ ಸೇರಿ ಅನೇಕ ದೇಶಗಳನ್ನು ಹಿಂದಿಕ್ಕಿ 5ನೆ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಶನಿವಾರ ಬೀದರ್ ಜಿಲ್ಲೆಯ ಹುಮ್ನಾಬಾದ್‍ನಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ, ಪ್ರಾದೇಶಿಕತೆಯ ಚಿಂತನೆ ಅಲ್ಲಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಶೋಷಿತರು, ಬಡವರು, ವಂಚಿತರು, ದಲಿತರು, ಮಹಿಳೆಯರು, ಯುವಜನತೆಗೆ ಹಾಗೂ ರೈತರ ಸಶಕ್ತೀಕರಣವೇ ನಮ್ಮ ಧ್ಯೇಯ ಎಂದು ತಿಳಿಸಿದರು.

ಅಮೆರಿಕ, ಯುರೋಪ್, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಆದರೆ, ಕಳೆದ 10 ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ಬಲಶಾಲಿಯಾಗಿ ಹೊರಹೊಮ್ಮಿದೆ ಎಂದ ಅವರು, 11ನೆ ಸ್ಥಾನದಲ್ಲಿದ್ದ ಭಾರತವು ಬ್ರಿಟನ್ ಸೇರಿ ಅನೇಕ ದೇಶಗಳನ್ನು ಹಿಂದಿಕ್ಕಿ 5ನೆ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News