×
Ad

ಸಂವಿಧಾನ ಆಶಯಗಳು ಸಂಪೂರ್ಣವಾಗಿ ಜಾರಿಯಾಗಲಿ : ರಮೇಶ್ ಡಾಕುಳಗಿ

Update: 2026-01-26 19:14 IST

ಬೀದರ್ : ಸಂವಿಧಾನ ಆಶಯಗಳು ಸಂಪೂರ್ಣ ಜಾರಿಯಾಗಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)  ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ ಅವರು ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಚರಿಸಲಾದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಡಾಕುಳಗಿ, ಈ ಸಂವಿಧಾನವು 395 ಕಲಂ, 22 ಭಾಗ ಹಾಗೂ 8 ಷೆಡ್ಯೂಲ್ ಗಳು ಒಳಪಟ್ಟಿದೆ. ಇದರಲ್ಲಿ ಕೇವಲ ಐದು ಕಲಂಗಳು ಮಾತ್ರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಂಬಂಧಪಟ್ಟಿವೆ ಎಂದರು.

ಎಸ್ಸಿ, ಎಸ್ಟಿ ಸಮುದಾಯಗಳಿಗೆ 5 ಕಲಂಗಳು ಮಾತ್ರ ಸಂಬಂಧಪಟ್ಟಿವೆ. ಅವುಗಳೆಂದರೆ ಶಿಕ್ಷಣದಲ್ಲಿ ಮೀಸಲಾತಿ, ಹುದ್ದೆಯಲ್ಲಿ ಮೀಸಲಾತಿ, ರಾಜಕೀಯದಲ್ಲಿ ಮೀಸಲಾತಿ, ಎಸ್ಸಿ, ಎಸ್ಟಿ ಭದ್ರತೆ ಕಾಯ್ದೆ ಹಾಗೂ ಸಾಮಾಜಿಕ ನ್ಯಾಯವಾಗಿದೆ. ಈ ಐದು ಕಾನೂನುಗಳು ಬಿಟ್ಟರೆ ಉಳಿದ 390 ಕಲಂ ಗಳು ಈ ದೇಶ ಪ್ರತಿಯೊಬ್ಬ ನಾಗರಿಕರಿಗೆ ಸೇರಿದ್ದಾಗಿವೆ. ಆದರೆ ಎಲ್ಲರಲ್ಲೂ ಸಂವಿಧಾನ ಎಂದರೆ ಎಸ್ಸಿ, ಎಸ್ಟಿ ಜನರದ್ದು ಎನ್ನುವ ಭಾವನೆ ಇದೆ. ಭಾರತ ಸಂವಿಧಾನ ಭಾರತದ ಎಲ್ಲ ನಾಗರಿಕರ ಸಂವಿಧಾನವಾಗಿದೆ. ಅಂಬೇಡ್ಕರ್ ಎಂದರೆ ಎಲ್ಲರ ಅಂಬೇಡ್ಕರ್ ಎನ್ನುವ ಭಾವನೆ ಈ ದೇಶದ ಜನರಲ್ಲಿ ಮೂಡಿದಾಗ ಮಾತ್ರ ಗಣರಾಜ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.

ಇಂದು ಸಂವಿಧಾನ ಅಪಾಯ ಎದುರಿಸುತ್ತಿದೆ. ಸಂವಿಧಾನಿಕ ಸ್ವತಂತ್ರ ಸಂಸ್ಥೆಗಳಾಗಿದ್ದರು ಕೂಡ ಚುನಾವಣಾ ಆಯೋಗ, ಈಡಿ, ಐಟಿ, ಸಿಬಿಐ ಅಂತಹ ಸಂಸ್ಥೆಗಳು ಸರ್ಕಾರದ ನಿರ್ದೇಶನದಂತೆ ನಡೆಯುತ್ತಿವೆ. ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸದ ಸಾಗರ್ ಖಂಡ್ರೆ, ಮಾರುತಿ ಬೌದ್ದೆ, ಸುನಿಲ್ ಸಂಗಮ್, ಅಂಬಾದಾಸ್ ಗಾಯಕವಾಡ್ ಹಾಗೂ ಸೂರ್ಯಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News