ವಾಲ್ಮೀಕಿ ಋಷಿಯ ಚಿಂತನೆಗಳು ಇಂದಿಗೂ ದಾರಿದೀಪ : ಶಾಸಕ ಸಿದ್ದು ಪಾಟೀಲ್
ಹುಮನಾಬಾದ್ : ಸತ್ಯ, ಧರ್ಮ, ಕರ್ತವ್ಯ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಅವರ ಚಿಂತನೆಗಳು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದು ಶಾಸಕ ಸಿದ್ದು ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಕೋಳಿವಾಡ ಹಾಗೂ ವಾಂಜರಿ ಬಡಾವಣೆಯಲ್ಲಿ ನಡೆದ ವಾಲ್ಮೀಕಿ ಅವರ ಜಯಂತಿಯಲ್ಲಿ ಭಾಗವಹಿಸಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸಿ ಭಾರತೀಯ ಸಾಹಿತ್ಯ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ದತ್ತಾತ್ರೇಯ ಮಹಾರಾಜ್, ಸಮಾಜ ಮುಖಂಡರಾದ ಅನಿಲ್ ಪಲ್ಲರಿ, ನಾಗಭೂಷಣ್ ಸಂಗಮ, ಅರುಣ್ ಬಾವಗಿ, ಸಂತೋಷ ಸಂಗಮ್, ಕಿಶೋರ್ ನಟ್ಟಿ, ಪ್ರಕಾಶ್ ರುಕ್ಮಿಣಿ, ಶಿವು ಸಿರಿಗಂದೆ, ಪೋಲದಾಸ್ ಹಾಗೂ ದತ್ತು ಪರಿಟ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.