ಎಸ್ಐಆರ್ | ಬೀದರ್ ಜಿಲ್ಲೆಯಲ್ಲಿ ಒಟ್ಟು 14,61,959 ಅರ್ಜಿ ವಿತರಣೆ, 10,60,769 ಅರ್ಜಿ ಸ್ವೀಕಾರ
ಬೀದರ್: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅಂಗವಾಗಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜುಲೈ 23ರವರೆಗೆ ಒಟ್ಟು 14,61,959 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, 10,60,769 ನಮೂನೆಗಳು ಸ್ವೀಕೃತಗೊಂಡಿವೆ. ಜೊತೆಗೆ 68,066 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ ಎಂದು ಬೀದರ್ ಚುನಾವಣಾ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 2,57,095 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, 1,98,912 ನಮೂನೆಗಳು ಸ್ವೀಕೃತಗೊಂಡಿವೆ. ಇಲ್ಲಿ 7,898 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ.
ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ 2,62,818 ನಮೂನೆಗಳನ್ನು ವಿತರಿಸಿದ್ದು, 1,92,113 ನಮೂನೆಗಳು ಸ್ವೀಕೃತಗೊಂಡಿವೆ. 13,525 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2,43,811 ಗಣತಿ ನಮೂನೆಗಳನ್ನು ವಿತರಿಸಿದ್ದು, 1,93,573 ನಮೂನೆಗಳು ಸ್ವೀಕೃತಗೊಂಡಿವೆ. 17,731 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2,19,880 ನಮೂನೆಗಳನ್ನು ವಿತರಿಸಿದ್ದು, 1,59,380 ನಮೂನೆಗಳು ಸ್ವೀಕೃತಗೊಂಡಿವೆ. 12,987 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ.
ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ 2,48,809 ಗಣತಿ ನಮೂನೆಗಳನ್ನು ವಿತರಿಸಿದ್ದು, 1,45,680 ನಮೂನೆಗಳು ಸ್ವೀಕೃತಗೊಂಡಿವೆ. 9,282 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ.
ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ 2,29,546 ಗಣತಿ ನಮೂನೆಗಳನ್ನು ವಿತರಿಸಿದ್ದು, 1,71,111 ನಮೂನೆಗಳು ಸ್ವೀಕೃತಗೊಂಡಿವೆ. 6,643 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 14,61,959 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈವರೆಗೆ 10,60,769 ನಮೂನೆಗಳು ಸ್ವೀಕೃತಗೊಂಡಿವೆ. ಒಟ್ಟು 68,066 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ ಎಂದು ಚುನಾವಣಾ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.