ಕರ್ಪೂರಿ ಠಾಕೂರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ: ಮೋದಿ ... ... LIVE - ‘ನೀವು ಅಪರಾಧಿಗಳನ್ನು ಹೇಗೆ ರಕ್ಷಿಸುತ್ತೀರಿ?’: ಪ್ರತಿಪಕ್ಷಗಳಿಗೆ ಮೋದಿ ಪ್ರಶ್ನೆ
ಕರ್ಪೂರಿ ಠಾಕೂರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ: ಮೋದಿ
“ನಮ್ಮ ಮುಂದಿನ ಸರ್ಕಾರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಬಡವರನ್ನು ಬಡತನದಿಂದ ಮೇಲೆತ್ತಲು ಹಲವಾರು ಯೋಜನೆಗಳನ್ನು ನೀಡಿದ್ದೇವೆ - ವಸತಿ, ನೀರು, ವೈದ್ಯಕೀಯ ಸೇವೆ, ಬ್ಯಾಂಕ್ ಖಾತೆಗಳು, ವಿದ್ಯುತ್, ಪಡಿತರ, ಆಹಾರ ಭದ್ರತೆ, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಹಿಂದುಳಿದ ವರ್ಗದ ಜನರ ಬಗ್ಗೆ ಕಾಂಗ್ರೆಸ್ ವರ್ತನೆಯನ್ನು ಖಂಡಿಸಿದ ಅವರು, “ಕರ್ಪೂರಿ ಠಾಕೂರ್ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶ್ರಮಿಸಿದ ರೀತಿ ನಿಜಕ್ಕೂ ಖೇದನೀಯ. ಹಿಂದುಳಿದ ವರ್ಗಗಳ ಉನ್ನತಿಗೆ ಶ್ರಮಿಸಿದ ಠಾಕೂರ್ರನ್ನು ಕಾಂಗ್ರೆಸ್ ಅವಮಾನಿಸಿತು. ಕರ್ಪೂರಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದೇವೆ. ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಎಷ್ಟು ಒಬಿಸಿ ಜನರು ಸರ್ಕಾರಿ ಹುದ್ದೆಗಳಲ್ಲಿದ್ದಾರೆ ಎಂದು ಅವರು ಕೇಳುತ್ತಲೇ ಇರುತ್ತಾರೆ. ಅವರು ತಮ್ಮ ಮುಂದೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ನೋಡುವುದಿಲ್ಲವೇ? ಎಂದು ತಮ್ಮನ್ನೇ ಗುರಿಯಾಗಿಸಿ ಮೋದಿ ಹೇಳಿದರು.