LIVE - ‘ನೀವು ಅಪರಾಧಿಗಳನ್ನು ಹೇಗೆ ರಕ್ಷಿಸುತ್ತೀರಿ?’: ಪ್ರತಿಪಕ್ಷಗಳಿಗೆ ಮೋದಿ ಪ್ರಶ್ನೆ
Photo : Sansad TV
ಹೊಸದಿಲ್ಲಿ :“10 ವರ್ಷಗಳ ಹಿಂದೆ, ದೇಶದಲ್ಲಿ ವ್ಯಾಪಕವಾಗಿರುವ ಹಗರಣಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಂಸತ್ತು ಒತ್ತಾಯಿಸಿತು. ಈಗ ಭ್ರಷ್ಟರು ಕ್ರಮ ಎದುರಿಸುತ್ತಿದ್ದಾರೆ ಎಂದು ಕೋಪಗೊಂಡಿದ್ದೀರಿ. ನೀವು ಆರೋಪಿಗಳನ್ನು ರಕ್ಷಿಸುತ್ತಿದ್ದೀರಿ” ಎಂದು ಈಡಿ ದಾಳಿ ಕುರಿತು ಪ್ರತಿಪಕ್ಷಗಳ ಟೀಕೆಗಳಿಗೆ ಪ್ರಧಾನಿ ಮೋದಿ ಉತ್ತಿರಿಸಿದರು.
ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿರುವ ಪ್ರಧಾನಿ ಮೋದಿ, ಜನ್ ಧನ್ ಖಾತೆಗಳ ಮೂಲಕ, ಕೇಂದ್ರ ಸರ್ಕಾರವು 30 ಲಕ್ಷ ಕೋಟಿ ತೆರಿಗೆ ತಪ್ಪಿಸುವ ಮೋಸದ ಖಾತೆಗಳನ್ನು ಅಳಿಸಿದೆ” ಎಂದು ಹೇಳಿದ್ದಾರೆ.
ಸರಿಯಾದ ಸಹಾಯ ಸಿಕ್ಕರೆ, ನಮ್ಮ ದೇಶದ ಬಡವರು ಬಡತನವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಂದು ನಮ್ಮ ದೇಶದ 50 ಕೋಟಿ ಬಡವರು ಬ್ಯಾಂಕ್ ಖಾತೆ ಹೊಂದಿದ್ದಾರೆ, ನಾಲ್ಕು ಕೋಟಿ ಮಂದಿ ಮನೆ ಹೊಂದಿದ್ದಾರೆ. 11 ಕೋಟಿಗೂ ಹೆಚ್ಚು ಬಡವರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಿದೆ. 55 ಕೋಟಿಗೂ ಹೆಚ್ಚು ಬಡವರು ಆಯುಷ್ಮಾನ್ ಭಾರತ್ ಕಾರ್ಡ್ ಪಡೆದಿದ್ದಾರೆ ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.
“ನಮ್ಮ ಮುಂದಿನ ಸರ್ಕಾರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಬಡವರನ್ನು ಬಡತನದಿಂದ ಮೇಲೆತ್ತಲು ಹಲವಾರು ಯೋಜನೆಗಳನ್ನು ನೀಡಿದ್ದೇವೆ - ವಸತಿ, ನೀರು, ವೈದ್ಯಕೀಯ ಸೇವೆ, ಬ್ಯಾಂಕ್ ಖಾತೆಗಳು, ವಿದ್ಯುತ್, ಪಡಿತರ, ಆಹಾರ ಭದ್ರತೆ, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ” ಎಂದುರ ಅವರು ಹೇಳಿದರು.
“ಕರ್ಪೂರಿ ಠಾಕೂರ್ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶ್ರಮಿಸಿದ ರೀತಿ ನಿಜಕ್ಕೂ ಖೇದನೀಯ. ಹಿಂದುಳಿದ ವರ್ಗಗಳ ಉನ್ನತಿಗೆ ಶ್ರಮಿಸಿದ ಠಾಕೂರ್ರನ್ನು ಕಾಂಗ್ರೆಸ್ ಅವಮಾನಿಸಿತು. ಕರ್ಪೂರಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದೇವೆ. ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಎಷ್ಟು ಒಬಿಸಿ ಜನರು ಸರ್ಕಾರಿ ಹುದ್ದೆಗಳಲ್ಲಿದ್ದಾರೆ ಎಂದು ಅವರು ಕೇಳುತ್ತಲೇ ಇರುತ್ತಾರೆ. ಅವರು ತಮ್ಮ ಮುಂದೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ನೋಡುವುದಿಲ್ಲವೇ? ಎಂದು ತಮ್ಮನ್ನೇ ಗುರಿಯಾಗಿಸಿ ಮೋದಿ ಪ್ರತಿಪಕ್ಷಗಳನ್ನು ಟೀಕಿಸಿದರು.
ಮೋದಿ ಭಾಷಣದ ಲೈವ್ ಅಪ್ಡೇಟ್ ಇಲ್ಲಿದೆ.
‘ನೀವು ಅಪರಾಧಿಗಳನ್ನು ಹೇಗೆ ರಕ್ಷಿಸುತ್ತೀರಿ?’: ಪ್ರತಿಪಕ್ಷಗಳಿಗೆ ಮೋದಿ ಪ್ರಶ್ನೆ
ಈಡಿ ದಾಳಿ ಕುರಿತು ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ಮೋದಿ, “10 ವರ್ಷಗಳ ಹಿಂದೆ, ದೇಶದಲ್ಲಿ ವ್ಯಾಪಕವಾಗಿರುವ ಹಗರಣಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಂಸತ್ತು ಒತ್ತಾಯಿಸಿತು. ಈಗ ಭ್ರಷ್ಟರು ಕ್ರಮ ಎದುರಿಸುತ್ತಿದ್ದಾರೆ ಎಂದು ಕೋಪಗೊಂಡಿದ್ದೀರಿ. ನೀವು ಆರೋಪಿಗಳನ್ನು ರಕ್ಷಿಸುತ್ತಿದ್ದೀರಿ”. ಜನ್ ಧನ್ ಖಾತೆಗಳ ಮೂಲಕ, ಕೇಂದ್ರ ಸರ್ಕಾರವು 30 ಲಕ್ಷ ಕೋಟಿ ತೆರಿಗೆ ತಪ್ಪಿಸುವ ಮೋಸದ ಖಾತೆಗಳನ್ನು ಅಳಿಸಿದೆ” ಎಂದು ಹೇಳಿದ್ದಾರೆ.
ದಶಕದ ಹಿಂದೆ ಸದನದ ಸಂಪೂರ್ಣ ಸಮಯ ಭ್ರಷ್ಟಾಚಾರದ ಚರ್ಚೆಗಳಲ್ಲೇ ಕಳೆಯುತ್ತಿತ್ತು. ಈಗ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಾಗ ಅದಕ್ಕೂ ವಿರೋಧವಿದೆ: ಪ್ರಧಾನಿ
ಹಣದುಬ್ಬರದ ವಿಷಯದ ಕುರಿತು, ಮೋದಿ ಅವರು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಉದಾಹರಣೆಗಳನ್ನು ಉಲ್ಲೇಖಿಸಿದರು. ಅವರಿಬ್ಬರೂ ಕೆಂಪು ಕೋಟೆಯಿಂದ ಮಾಡಿದ ಭಾಷಣಗಳಲ್ಲಿ ತಮ್ಮ ನಿಯಮಗಳ ಅವಧಿಯಲ್ಲಿ ಹಣದುಬ್ಬರವು ಹೇಗೆ ದೇಶದಲ್ಲಿ ಸಮಸ್ಯೆಯಾಗಿ ಉಳಿದಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ ಎಂದು ಮೋದಿ ಹೇಳಿದರು.
ನನ್ನ ಆಡಳಿತದಲ್ಲಿ ಮಹಿಳೆಯರ ಬಗೆಗಿನ ದೇಶದ ಮನೋಭಾವ ಬದಲಾಗಿದೆ: ಪ್ರಧಾನಿ ಮೋದಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಣದುಬ್ಬರ ಹೆಚ್ಚಾಗುತ್ತದೆ: ಮೋದಿ
ನಮ್ಮ ಮುಂದಿನ ಗಮನ ಹಸಿರು ಶಕ್ತಿ ವಲಯದ ಮೇಲೆ. ಇದು ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ಭಾರತವು ಮುನ್ನಡೆ ಸಾಧಿಸಬೇಕಾಗಿದೆ : ಮೋದಿ
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ: ಮೋದಿ
ಸರಿಯಾದ ಸಹಾಯ ಸಿಕ್ಕರೆ, ನಮ್ಮ ದೇಶದ ಬಡವರು ಬಡತನವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಂದು ನಮ್ಮ ದೇಶದ 50 ಕೋಟಿ ಬಡವರು ಬ್ಯಾಂಕ್ ಖಾತೆ ಹೊಂದಿದ್ದಾರೆ, ನಾಲ್ಕು ಕೋಟಿ ಮಂದಿ ಮನೆ ಹೊಂದಿದ್ದಾರೆ. 11 ಕೋಟಿಗೂ ಹೆಚ್ಚು ಬಡವರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಿದೆ. 55 ಕೋಟಿಗೂ ಹೆಚ್ಚು ಬಡವರು ಆಯುಷ್ಮಾನ್ ಭಾರತ್ ಕಾರ್ಡ್ ಪಡೆದಿದ್ದಾರೆ ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.
ಕರ್ಪೂರಿ ಠಾಕೂರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ: ಮೋದಿ
“ನಮ್ಮ ಮುಂದಿನ ಸರ್ಕಾರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಬಡವರನ್ನು ಬಡತನದಿಂದ ಮೇಲೆತ್ತಲು ಹಲವಾರು ಯೋಜನೆಗಳನ್ನು ನೀಡಿದ್ದೇವೆ - ವಸತಿ, ನೀರು, ವೈದ್ಯಕೀಯ ಸೇವೆ, ಬ್ಯಾಂಕ್ ಖಾತೆಗಳು, ವಿದ್ಯುತ್, ಪಡಿತರ, ಆಹಾರ ಭದ್ರತೆ, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಹಿಂದುಳಿದ ವರ್ಗದ ಜನರ ಬಗ್ಗೆ ಕಾಂಗ್ರೆಸ್ ವರ್ತನೆಯನ್ನು ಖಂಡಿಸಿದ ಅವರು, “ಕರ್ಪೂರಿ ಠಾಕೂರ್ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶ್ರಮಿಸಿದ ರೀತಿ ನಿಜಕ್ಕೂ ಖೇದನೀಯ. ಹಿಂದುಳಿದ ವರ್ಗಗಳ ಉನ್ನತಿಗೆ ಶ್ರಮಿಸಿದ ಠಾಕೂರ್ರನ್ನು ಕಾಂಗ್ರೆಸ್ ಅವಮಾನಿಸಿತು. ಕರ್ಪೂರಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದೇವೆ. ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಎಷ್ಟು ಒಬಿಸಿ ಜನರು ಸರ್ಕಾರಿ ಹುದ್ದೆಗಳಲ್ಲಿದ್ದಾರೆ ಎಂದು ಅವರು ಕೇಳುತ್ತಲೇ ಇರುತ್ತಾರೆ. ಅವರು ತಮ್ಮ ಮುಂದೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ನೋಡುವುದಿಲ್ಲವೇ? ಎಂದು ತಮ್ಮನ್ನೇ ಗುರಿಯಾಗಿಸಿ ಮೋದಿ ಹೇಳಿದರು.
ಇಂಡಿಯಾ ಮೈತ್ರಿಕೂಟಕ್ಕೆ ನಂಬಿಕೆಯ ಪ್ರಶ್ನೆ : ಮೋದಿ
ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಒಕ್ಕೂಟಕ್ಕೆ ತಮ್ಮೊಳಗೆ ನಂಬಿಕೆ ಇಲ್ಲದಿದ್ದರೆ, ಅವರು ದೇಶದ ಜನರನ್ನು ಹೇಗೆ ನಂಬುತ್ತಾರೆ ಎಂದು ಮೋದಿ ಲೋಕಸಭೆಯಲ್ಲಿ ಪ್ರಶ್ನಿಸಿದರು. ತಮ್ಮ ಮೂರನೇ ಅವಧಿಯ ಸರ್ಕಾರದಲ್ಲಿ ತಮ್ಮ ಸರ್ಕಾರವು 'ವಿಕಸಿತ ಭಾರತ' ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು.
ನಾವು ಮಾಡಿರುವ ಕೆಲಸ ಮಾಡಲು ಕಾಂಗ್ರೆಸ್‌ಗೆ 100 ವರ್ಷ ಬೇಕು: ಮೋದಿ
“ನಮ್ಮ ಸರಕಾರದಿಂದ ಬಡವರಿಗಾಗಿ 4 ಕೋಟಿ ಮನೆ ಕಟ್ಟಿದ್ದೇವೆ. ನಗರದಲ್ಲಿ ವಾಸಿಸುವ ಬಡವರಿಗೆ 80 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವೆ. ಈ ಕೆಲಸ ಮಾಡಲು ಕಾಂಗ್ರೆಸ್ ಗೆ 100 ವರ್ಷ ಬೇಕಾಗುತ್ತಿತ್ತು, ಐದು ತಲೆಮಾರುಗಳು ಕಳೆದು ಹೋಗುತ್ತಿತ್ತು"ಎಂದು ಪ್ರಧಾನಿ ಮೋದಿ ಹೇಳಿದರು