ಹನೂರು | ಹುಲಿ ಹತ್ಯೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಕುಟುಂಬಸ್ಥರು
Update: 2025-10-09 00:08 IST
ಹನೂರು, ಅ.8: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹೆಬ್ಬುಲಿಯನ್ನು ಪ್ರತಿಕಾರಕ್ಕೆ ವಿಷವಿಟ್ಟು ಹತ್ಯೆ ಮಾಡಿ ತಲೆ ಮರೆಯಿಸಿಕೊಂಡಿದ್ದ ಆರೋಪಿಯನ್ನು ಕುಟುಂಬಸ್ಥರೇ ಪತ್ತೆ ಹಚ್ಚಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಬುಧವಾರ ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಪಚ್ಚೆದೊಡ್ಡಿಯಲ್ಲಿ ನಡೆದಿದ್ದ ಹೆಬ್ಬುಲಿ ಹತ್ಯೆ ಪ್ರಕರಣದ ಆರೋಪಿ ಸಿದ್ದ ತಲೆಮರೆಯಿಸಿಕೊಂಡಿದ್ದನು. ಈತನನ್ನು ಕುಟುಂಬಸ್ಥರೇ ಪತ್ತೆ ಹಚ್ಚಿ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ ಅಪರೂಪದ ಘಟನೆಯಾಗಿದೆ.
ಹುಲಿ ಹತ್ಯೆಯ ಮೂವರು ಆರೋಪಿಗಳಾದ ಗೋವಿಂದ, ಅಭಿಷೇಕ ಹಾಗೂ ಹಸುವಿನ ಮಾಲಕ ಚಂದು ತಲೆಮರೆಯಿಸಿಕೊಂಡಿದ್ದು, ಅವರುಗಳ ಪತ್ತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.