×
Ad

ಎಲ್ಲೂ ಹೋಗದ ಸಿದ್ದರಾಮಯ್ಯನವರು ಈಗ ದಿಲ್ಲಿಯಲ್ಲೇ ಠಿಕಾಣಿ ಹೂಡಿದ್ದಾರೆ : ಆರ್‌.ಅಶೋಕ್‌

"ಡಿ.ಕೆ.ಶಿವಕುಮಾರ್‌ ಸುಮ್ಮನೆ ಕೂರುವ ವ್ಯಕ್ತಿಯಲ್ಲ, ಅವರು ಹಠವಾದಿ"

Update: 2025-11-16 15:09 IST

ಚಾಮರಾಜನಗರ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲು ಎಲ್ಲಾ ದೇವರಿಗೆ ಪೂಜೆ ಮಾಡಿ ಆರ್ಶೀವಾದ ಪಡೆದುಕೊಂಡಿದ್ದಾರೆ. ಆದರೆ ಎಲ್ಲರ ಹಣೆಬರಹ ಬರೆಯುವ ಬ್ರಹ್ಮನನ್ನೇ ಮರೆತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದರು.

ಚಾಮರಾಜನಗರದದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಬಿಹಾರ ಎಲೆಕ್ಷನ್ ಅವರ ಪಾಲಿನ ಬ್ರಹ್ಮ ಇದ್ದ ಹಾಗೆ, ಬ್ರಹ್ಮ ವರ ಕೊಡಲಿಲ್ಲ, ಅದಕ್ಕೆ ಸಿದ್ದರಾಮಯ್ಯ ಈಗ ಆಟ ಶುರು ಮಾಡಿದ್ದಾರೆ. ಎಲ್ಲೂ ಹೋಗದೆ ಇದ್ದವರು ಈಗ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಹೈಕಮಾಂಡ್‌ಗಿಂತ ನಾನೇ ಪವರ್ ಪುಲ್ ಅಂತಾ ಸಿದ್ದರಾಮಯ್ಯ ತೋರಿಸುತ್ತಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್‌ ಸುಮ್ಮನೆ ಕೂರುವ ವ್ಯಕ್ತಿಯಲ್ಲ, ಅವರು ಹಠವಾದಿಗಳು, ಅವರು ಸಮಯ ಬಂದಾಗ ಆಟ ಶುರು ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರೂ ಲೂಟಿಕೋರರು ಲೂಟಿ ಮಾಡಬೇಕೆಂದೇ ಇದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News