ಚಾಮರಾಜನಗರ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಿಎಂಡಬ್ಲ್ಯು ಕಾರು
Update: 2026-07-10 14:51 IST
ಚಾಮರಾಜನಗರ : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಿಎಂಡಬ್ಲ್ಯು ಕಾರೊಂದು ರಸ್ತೆ ಬದಿಗೆ ಪಲ್ಟಿಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಮಿಳುನಾಡಿನಿಂದ ಬಂಡೀಪುರ ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಪ್ರವಾಸಿಗರ ಕಾರು ಹಂಗಳ ಗ್ರಾಮದ ಇಳಿಜಾರು ರಸ್ತೆಯಲ್ಲಿ ಏಕಾಏಕಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದವರಿಗೆ ಏರ್‌ಬ್ಯಾಗ್‌ಗಳು ತೆರೆದು ರಕ್ಷಣೆ ನೀಡಿದ ಪರಿಣಾಮ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಪಲ್ಟಿಯಾಗಿದ್ದ ಕಾರನ್ನು ಕ್ರೇನ್ ಸಹಾಯದಿಂದ ಸ್ಥಳದಿಂದ ತೆರವುಗೊಳಿಸಲಾಗಿದೆ.