ಚಾಮರಾಜನಗರ : ನಿಂತಿದ್ದ ಲಾರಿಗೆ ಗೂಡ್ಸ್ ಆಟೋ ಢಿಕ್ಕಿ; ಇಬ್ಬರು ಮೃತ್ಯು
Update: 2025-09-17 08:03 IST
ಚಾಮರಾಜನಗರ : ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ಳೇಗಾಲ-ಯಳಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮದ್ದೂರು ಸಮೀಪಿದ ಎಳೆಪಿಳ್ಳಾರಿ ಬಳಿ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ತೆರಳಲು ನಿಂತಿದ್ದ ಲಾರಿಗೆ ಉಮ್ಮತೂರು ಕಡೆಯಿಂದ ಬಂದಂತಹ ಟೊಮೊಟೊ ತುಂಬಿದಂತಹ ಗೂಡ್ಸ್ ಆಟೋ ನಿಯಂತ್ರಣ ತಪ್ಪಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ಮೃತರನ್ನು ಉಮ್ಮತ್ತೂರು ಗ್ರಾಮದ ಸುಮಂತ್ (22) ನಿತಿನ್ ಕುಮಾರ್ (16) ಎಂದುಗುರುತಿಸಲಾಗಿದೆ.
ಮಾಹಿತಿ ತಿಳಿದ ಕೂಡಲೇ ಯಳಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮೃತ ದೇಹಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ