×
Ad

ಚಾಮರಾಜನಗರ: ಗೂಡ್ಸ್ ಟೆಂಪೋ ಪಲ್ಟಿ; 30 ಮಂದಿಗೆ ಗಾಯ

Update: 2024-11-02 09:59 IST

ಚಾಮರಾಜನಗರ: ಮಹದೇಶ್ವರ ದರ್ಶನ ಪಡೆದು ಗ್ರಾಮಕ್ಕೆ ಹಿಂತಿರುಗುತ್ತಿದ್ದ ಭಕ್ತರಿದ್ದ ಗೂಡ್ಸ್ ಟೆಂಪೋ ಪಲ್ಟಿಯಾಗಿ  30 ಮಂದಿ ಗಾಯ ಗೊಂಡಿರುವ ಘಟನೆ  ಹನೂರು ತಾಲ್ಲೂಕಿನ ಹುಣಸೆಪಾಳ್ಯದ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಗಾಯಾಳುಗಳನ್ನು ಹನೂರು ತಾಲ್ಲೂಕಿನ ವಿ.ಎಸ್ ದೊಡ್ಡಿ, ಒಡೆಯರಪಾಳ್ಯ , ಕರಿಯಪ್ಪನದೊಡ್ಡಿ ಗ್ರಾಮಸ್ಥರು ಎಂದು ಗುರುತಿಸಲಾಗಿದೆ. ಹುಣಸೆಪಾಳ್ಯದ ಸಮೀಪದ ತಟ್ಟೆಕರೆ ಮಹದೇಶ್ವರ ದೇವಾಲಯಕ್ಕೆ ತೆರಳಿ ಅಮವಾಸೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ಹಿಂತಿರುಗುವಾಗ ಘಟನೆ ನಡೆದಿದೆ

ಗಾಯಗೊಂಡವರನ್ನು ಕೊಳ್ಳೇಗಾಲ ಮತ್ತು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವಾಹನ ಚಾಲಕ ನಾಗೇಂದ್ರ ಹಾಗೂ ಅವರ ತಂದೆ ಮಹದೇವಸ್ವಾಮಿ ಅವರಿಗೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News