×
Ad

ಚಾಮರಾಜನಗರ : ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Update: 2024-10-05 14:06 IST

ಚಾಮರಾಜನಗರ : ಧಾರಾಕಾರ ಮಳೆಯಿಂದಾಗಿ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.

ಧಾರಾಕಾರ ಮಳೆಯಿಂದ ಕುಪ್ಪಮ್ಮ ಕಾಲುವೆಯಿಂದ ಹೆಚ್ಚುವರಿ ನೀರು ಹರಿದ ಪರಿಣಾಮ ಕೊಳ್ಳೆಗಾಲ ಇಂದಿರಾ ಕಾಲೋನಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಸಮೀಪದ ಅಣಗಳ್ಳಿ ಹಾಗೂ ಉಪ್ಪಾರಮೊಳೆ ವ್ಯಾಪ್ತಿಯ ಜಮೀನುಗಳಿಗೂ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಫಸಲು ಹಾನಿಯಾಗಿದೆ

ಈ ಸಂಬಂಧ ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ರಮೇಶ್ ಹಾಗೂ ವಾರ್ಡ್ ಸದಸ್ಯ ದರುಣೇಶ್ ಭೇಟಿನೀಡಿ ಪರಿಶೀಲಿಸಿದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News