×
Ad

ಚಾಮರಾಜನಗರ: ಅಕ್ರಮ ಹಾವು ಸಾಗಾಟ; ಇಬ್ಬರ ಬಂಧನ

Update: 2024-10-03 13:02 IST

ಚಾಮರಾಜನಗರ : ಮಣ್ಣು ಮುಕ್ಕ ಹಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ಪೊಲೀಸರು ಹನೂರು ಹೂರವಲಯದ ಅಜ್ಜಿಪುರ ರಸ್ತೆಯ ಹರತ್ತನಹಳ್ಳ ಬಳಿ ಬಂಧಿಸಿದ್ದು, ಜೀವಂತ ಹಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಣ್ಣು ಮುಕ್ಕ ಹಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ  ಪಡೆದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿದ್ದು, ಹಾವನ್ನು ಸಾಗಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಕಾಂತಿಕುಮಾರ್(31),ಹಾಗೂ ತುಮುಕೂರು ಜಿಲ್ಲೆಯ ಚನ್ನನಕುಂಟೆ ಗ್ರಾಮದ ಚೇತನ್ (24) ಎಂಬಾತರನ್ನು ಬಂಧಿಸಿದಲ್ಲದೆ ಹಾವು ಸಹಿತ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ವಿಜಯರಾಜ್ , ಮುಖ್ಯಪೇದೆ ಬಸವರಾಜ್ ಶಂಕರ್ ರಾಮಚಂದ್ರ ಲತಾ ಸ್ವಾಮಿ ಪೇದೆ ಬಸವರಾಜ್ ಚಾಲಕ ಪ್ರಭಾಕರ್ ಹಾಜರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News