ಚಾಮರಾಜನಗರ : ಕೆಟ್ಟು ನಿಂತ ಲಾರಿಯನ್ನು ರಸ್ತೆ ಮಧ್ಯೆ ಬಿಟ್ಟು ಹೋದ ಚಾಲಕ; ವಾಹನ ಸಂಚಾರ ಅಸ್ತವ್ಯಸ್ತ
ಚಾಮರಾಜನಗರ : ಕೆಟ್ಟು ನಿಂತ ಲಾರಿಯನ್ನು ರಸ್ತೆ ಮಧ್ಯೆ ಬಿಟ್ಟು ಚಾಲಕನೊಬ್ಬ ಹೋದ ಪರಿಣಾಮ ಇತರ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಹನೂರು ತಾಲ್ಲೂಕಿನ ಅಜ್ಜಿಪುರದಲ್ಲಿ ನಡೆದಿದೆ.
ಅಜ್ಜಿಪುರ ಮುಖ್ಯ ರಸ್ತೆಯ ಹೆದ್ದಾರಿಯಲ್ಲಿ, ಲಾರಿಯೊಂದು ಮಧ್ಯ ದಾರಿಯಲ್ಲಿ ಕೆಟ್ಟು ನಿಂತಿದ್ದರಿಂದ ಇತರ ವಾಹನ ಸವಾರರಿಗೆ ತೊಂದರೆ ಉಂಟಾಗಿದ್ದು, ಕೆಎಸ್ಸಾರ್ಟಿಸಿ ಬಸ್ ಗಳು ಗಂಟೆ ಗಂಟಲೆ ಕಾದು ನಿಂತಿದ್ದವು. ಕೊನೆಗೆ ಸ್ಥಳೀಯರು ಹಾಗೂ ಪ್ರಯಾಣಿಕರ ಸಹಾಯದಿಂದ ನಿಧಾನವಾಗಿ ಒಂದೊಂದು ವಾಹನಗಳನ್ನು ಕಳಿಸಿಕೊಡಲಾಗಿದೆ.
ರಸ್ತೆ ಮಧ್ಯೆ ಬಿಟ್ಟು ಹೋದ ಲಾರಿಯನ್ನು ಸಂಬಂಧಪಟ್ಟವರು ಸರಿಪಡಿಸಿ, ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ತೆರವುಗೊಳಿಸಬೇಕೆಂದು ಸಾರ್ವಜನಿಕರು, ಇತರ ಚಾಲಕರು ಒತ್ತಾಯಿಸಿದ್ದಾರೆ.
ಚಾಮರಾಜನಗರ : ಕೆಟ್ಟು ನಿಂತ ಲಾರಿಯನ್ನು ರಸ್ತೆ ಮಧ್ಯೆ ಬಿಟ್ಟು ಚಾಲಕನೊಬ್ಬ ಹೋದ ಪರಿಣಾಮ ಇತರ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಹನೂರು ತಾಲ್ಲೂಕಿನ ಅಜ್ಜಿಪುರದಲ್ಲಿ ನಡೆದಿದೆ. pic.twitter.com/sPI9Fc9tkf
— ವಾರ್ತಾ ಭಾರತಿ | Vartha Bharati (@varthabharati) September 9, 2025