×
Ad

ನಾಗಮಲೆ ಬಳಿ ಮತ್ತೆ ಚಿರತೆ ಹಾವಳಿ; ಮೇಕೆ ಬಲಿ, ಆತಂಕದಲ್ಲಿ ಗ್ರಾಮಸ್ಥರು

Update: 2026-05-25 12:56 IST

ಚಾಮರಾಜನಗರ : ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ನಿನ್ನೆ ಒಂದು ಚಿರತೆ ಸೆರೆಯಾಗಿದ್ದರೂ, ಸ್ಥಳೀಯರ ಆತಂಕ ಇನ್ನೂ ಕಡಿಮೆಯಾಗಿಲ್ಲ.

ಮಲೆ ಮಹದೇಶ್ವರ ಬೆಟ್ಟದ ಬಳಿಯ ಇಂಡಿಗನತ್ತದಿಂದ ಸುಮಾರು ಮೂರು ಕಿಲೋಮೀಟರ್ ದೂರದ ನಾಗಮಲೆ ಗ್ರಾಮದಲ್ಲಿ ಮತ್ತೆ ಚಿರತೆ ರವಿವಾರ ರಾತ್ರಿ ದಾಳಿ ನಡೆಸಿ ಮೇಕೆಯನ್ನು ಬಲಿ ಪಡೆದಿದ್ದು, ಈ ಘಟನೆ ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಭಯ ಹೆಚ್ಚಿಸಿದೆ.

ಕೆಲ ದಿನಗಳ ಹಿಂದೆ ನಾಗಮಲೆ ಮಾರ್ಗದಲ್ಲಿ ಬೆಂಗಳೂರು ಮೂಲದ ಹರ್ಷಿತ್ ಎಂಬ ಬಾಲಕನ ಸಾವಿಗೆ ಕಾರಣವಾದ ಚಿರತೆ ಇದೇನಾ ಅಥವಾ ಬೇರೆ ಚಿರತೆಯಾ ಎಂಬ ಗೊಂದಲ ಮುಂದುವರಿದಿದೆ. ಬೋನಿಗೆ ಸಿಕ್ಕ ಚಿರತೆಯೇ ದಾಳಿ ನಡೆಸಿತೇ ಎಂಬುದರ ಬಗ್ಗೆ ಅರಣ್ಯ ಇಲಾಖೆ ಇನ್ನೂ ಸ್ಪಷ್ಟನೆ ನೀಡಿಲ್ಲ.

ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಇನ್ನೂ ಚಿರತೆ ಸಂಚಾರ ಇರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚುವರಿ ಬೋನುಗಳನ್ನು ಅಳವಡಿಸಿ ಶೋಧ ಕಾರ್ಯಾಚರಣೆ ಮುಂದುವರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News