×
Ad

ಚಾಮರಾಜನಗರ | ವಿದ್ಯುತ್ ತಂತಿ ತಗಲಿ ಮೇವು ತುಂಬಿದ್ದ ಲಾರಿ ಬೆಂಕಿಗಾಹುತಿ

Update: 2024-04-17 15:25 IST

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯಹಟ್ಟಿ ಹಾಗೂ ಪಳನಿಮೇಡು ಮಾರ್ಗ ಮದ್ಯೆ ಗೋಶಾಲೆಗೆ ಮೇವು ತುಂಬಿಕೊಂಡು ತೆರುಳುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕುರುಟ್ಟಿಹೂಸೂರಿಗೆ ಜಾನುವಾರುಗಳಿಗೆ ಮೇವು ಸಾಗಣೆ ಮಾಡುತ್ತಿದ್ದ ಲಾರಿಗೆ ಪಳನಿಮೇಡು ಹಾಗೂ ಕೆಂಪಯ್ಯನಹಟ್ಟಿ ಮಾರ್ಗ ಮಧ್ಯೆ ಆಚಾನ್ ಕ್ಕಾಗಿ ವಿದ್ಯುತ್ ತಂತಿ ತಗಲಿದ್ದು, ಪರಿಣಾಮ ಮೇವು ಸಮೇತ ಲಾರಿ ಕೆಲ ನಿಮಿಷಗಳಲ್ಲಿ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News