×
Ad

ಚಾಮರಾಜನಗರ: ಬಸ್-ಬೈಕ್ ಢಿಕ್ಕಿ; ಓರ್ವ ಮೃತ್ಯು

Update: 2024-05-08 10:05 IST

ಚಾಮರಾಜನಗರ: ಖಾಸಗಿ ಬಸ್ ಹಾಗೂ ಬೈಕ್ ಮಧ್ಯೆ ಉಂಟಾದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಸಿಂಗನಲ್ಲೂರು ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತ‌ ವ್ಯಕ್ತಿಯನ್ನು ಸಿಂಗನಲ್ಲೂರು ಗ್ರಾಮದ ಶ್ರೀದರ್ (44) ಎಂದು ಗುರುತಿಸಲಾಗಿದೆ. ಹನೂರು ಪಟ್ಟಣದಲ್ಲಿ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಶ್ರೀಧರ್ ಎಂದಿನಂತೆ ಬುಧವಾರ ಬೆಳಿಗ್ಗೆ ಹನೂರಿಗೆ ಆಗಮಿಸಿ ಮರಳುವ ಸಂದರ್ಭದಲ್ಲಿ ಬಸ್ ಢಿಕ್ಕಿ ಹೊಡೆದು ಈ ಅವಘಡ ನಡೆದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News