×
Ad

ಪತ್ನಿ, ಮೂವರು ಪುತ್ರಿಯರ ಕತ್ತು ಸೀಳಿ ಹತ್ಯೆ; ಆರೋಪಿ ಪತಿ ನಾಪತ್ತೆ

Update: 2026-02-26 08:00 IST

ಹೊಸದಿಲ್ಲಿ: ಉತ್ತರ ದೆಹಲಿಯ ಸಮಯಪುರ ಬದ್ಲಿ ಎಂಬಲ್ಲಿ ಬುಧವಾರ 30 ವರ್ಷದ ಮಹಿಳೆ ಹಾಗೂ ಐದು, ನಾಲ್ಕು ಮತ್ತು ಮೂರು ವರ್ಷದ ಮೂವರು ಪುತ್ರಿಯರ ಶವಗಳು ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಶಂಕಿತ ಆರೋಪಿಯಾಗಿರುವ ಪತಿ ತಲೆ ಮರೆಸಿಕೊಂಡಿದ್ದಾನೆ. ಹತ್ಯೆಯ ಉದ್ದೇಶದ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮೃತಪಟ್ಟವರನ್ನು ಅನಿತಾ ಮತ್ತು ಅವರ ಮೂವರು ಮಕ್ಕಳೆಂದು ಗುರುತಿಸಲಾಗಿದೆ. ಈ ಕುಟುಂಬ ಪಾಟ್ನಾ ಮೂಲದ್ದಾಗಿದ್ದು, ಚಂದನ್ ಪಾರ್ಕ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಶಂಕಿತ ಆರೋಪಿಯನ್ನು ಮುಂಚುನ್ ಕೇವಾಟ್ ಎಂದು ಗುರುತಿಸಲಾಗಿದ್ದು, ಈತ ಅಝಾದ್‌ಪುರ ಮಂಡಿಯಲ್ಲಿ ಶುಂಠಿ ವ್ಯಾಪಾರಿ. "ಬೆಳಿಗ್ಗೆ 8ರ ಸುಮಾರಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ ನಾಲ್ವರ ಮೃತದೇಹಗಳನ್ನು ರಕ್ತದ ಮಡುವಿನಲ್ಲಿ ಪತ್ತೆ ಮಾಡಿದೆ" ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ. ಎಲ್ಲರ ಕತ್ತುಗಳನ್ನು ಹರಿತವಾದ ಆಯುಧಗಳಿಂದ ಸೀಳಲಾಗಿತ್ತು ಎಂದು ವಿವರಿಸಿದ್ದಾರೆ.

ಅಪರಾಧ ತನಿಖಾ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಾವೆಗಳನ್ನು ಕಲೆಹಾಕಿದ್ದಾರೆ. ಬೆಳಿಗ್ಗೆಯಿಂದಲೇ ಕೇವಾಟ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News