ಭದ್ರಾವತಿ: ಎತ್ತಿನಗಾಡಿಯಿಂದ ಬಿದ್ದು ಕೂಲಿ ಕಾರ್ಮಿಕ ಮೃತ್ಯು
Update: 2026-03-02 12:27 IST
ಶಿವಮೊಗ್ಗ: ಎತ್ತಿನಗಾಡಿಯಿಂದ ಬಿದ್ದು ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಮೃತರನ್ನು ಭದ್ರಾವತಿ ತಾಲೂಕಿನ ಶರವಣ (53) ಎಂದು ಗುರುತಿಸಲಾಗಿದೆ.
ಶರವಣ ರವಿವಾರ ಬೆಳಗ್ಗೆ ಅಡಿಕೆ ಮರವನ್ನು ಕಡಿದು ತಮ್ಮ ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಡಿಯ ಮೇಲೆ ಕುಳಿತು ತೆರಳುತ್ತಿದ್ದ ವೇಳೆ, ಜೇಡಿಕಟ್ಟೆಯ ವಿನಾಯಕ ಇಂಡಸ್ಟ್ರೀಸ್ ಸಮೀಪ ತಲುಪುತ್ತಿದ್ದಂತೆ ಶರವಣ ಹಠಾತ್ತನೆ ಆಯತಪ್ಪಿ ಗಾಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಮೃತದೇಹವನ್ನು ಹೆಚ್ಚಿನ ತಪಾಸಣೆ ಹಾಗೂ ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿಯ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಲಿದೆ.
ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.