ತುಳುನಾಡು ಸತ್ಯದ ಮಣ್ಣು ಇಲ್ಲಿ ಆಧರ್ಮಿಗಳು ಯಾರು ಉಳಿದಿಲ್ಲ : ಲಕ್ಷ್ಮೀಶ ಗಬ್ಬಲಡ್ಕ
ಕಾರ್ಕಳ : ಇದು ತುಳುನಾಡು ಸತ್ಯದ ಮಣ್ಣು, ಈ ಮಣ್ಣಿನಲ್ಲಿ ಅಧರ್ಮಿಗಳು ಯಾರು ಉದ್ದಾರ ಆಗಿಲ್ಲ ನಿಮ್ಮಿಂದ ಈ ಧರ್ಮದ ಉದ್ದಾರ ಆಗಲ್ಲ. ಪರಶುರಾಮ್ ಪ್ರತಿಮೆ ನಿರ್ಮಾಣದಲ್ಲಿ ನಡೆದ ಅಕ್ರಮ ಅಧರ್ಮವೊ ಧರ್ಮವೋ ಎಂದು ನೀವೂ ಯೋಚನೆ ಮಾಡಬೇಕಾಗಿದೆ ಸುನೀಲ್ ಕುಮಾರ್ ಒಬ್ಬ ನಯವಂಚಕ, ಸುರಸುಂದರಾಂಗನಗಿರಬಹುದು ಅಂದ ಮಾತ್ರಕ್ಕೆ ನಿಮ್ಮಿಂದ ಸತ್ಯ ಮಾತನಾಡಲು ಸಾಧ್ಯವೇ ತುಳುನಾಡಿನ ಮಣ್ಣಿಗೆ ದ್ರೋಹ ಬಗೆದವರು ಯಾರು ಉಳಿದಿಲ್ಲ ಎಂದು ಲಕ್ಷ್ಮೀಶ ಗಬ್ಬಲಡ್ಕ ಹೇಳಿದರು.
ಅವರು ಗ್ಯಾರಂಟಿ ಯೋಜನೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲೆಯ ಬಿಜೆಪಿ ಶಾಸಕರು ನಡೆಸುತ್ತಿ ರುವ ಸುಳ್ಳು ಅಪಪ್ರಚಾರಗಳಿಗೆ ಉತ್ತರವಾಗಿ ಕಾರ್ಕಳ ತಾಲೂಕು ಕಚೇರಿ ಮುಂಬಾಗದಲ್ಲಿ ನಡೆದ ಕಾಂಗ್ರೆಸ್ ನೇತೃತ್ವದಲ್ಲಿ "ಸತ್ಯಮೇವ ಜಯತೆ" ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕೇಂದ್ರ ಸರಕಾರ ಮಾಡಿಸಿದ್ದ ಖಾತೆ ಜೀರೋ ಬ್ಯಾಲೆನ್ಸ್, 15 ಲಕ್ಷ ಖಾತೆ ಪ್ರತಿಯೊಬ್ಬ ಖಾತೆಗೆ ಹಾಕ್ತೇನೆ ಎಂಬುದು ಜೀರೋ ಬ್ಯಾಲೆನ್ಸ್ ಆಗಿಯೇ ಉಳಿದಿದೆ ಆದರೆ ಈ ನಾಯಕರ ಖಾತೆ ಗಳು ತುಂಬಿದೆ. ವಿದೇಶದಲ್ಲಿರುವ ಕಪ್ಪು ಹಣ ಯಾರ ಖಾತೆಗೆ ಬರ್ಲಿಲ್ಲ ಅದ್ರೆ ವಿದೇಶದಲ್ಲಿ ಇವರ ಕಪ್ಪು ಹಣ ಜಾಸ್ತಿ ಆಯ್ತು ಅದರಿಂದ ಬಿಜೆಪಿ ಸಂಸದರು ಯಾರ ಸರಕಾರ ಜೀರೋ ಬ್ಲಾಲೆನ್ಸ್ ಸರಕಾರ ಎಂದು ಜನರಿಗೆ ಉತ್ತರ ನೀಡಲಿ ಎಂದರು.
ನಾರಾಯಣ ಗುರು ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಮಾತನಾಡಿ ಜಿಲ್ಲೆಯ ಶಾಸಕರು ಪಾoಡವರಾದರೆ ಕೋಟ ಶ್ರೀನಿವಾಸ್ ಪೂಜಾರಿ ಯಾರು ಕೌರವರೊಂದಿಗಿರುವ ಶಕುನಿಯ ಪಾತ್ರವೇ ಇವರು ಈ ಭಾಗದ ಜನರ ಸಮಸ್ಯೆ ಕಸ್ತೂರಿ ರಂಗನ್ ವರದಿ ಬಗ್ಗೆ ಸಂಸತ್ ನಲ್ಲಿ ಬಗ್ಗೆ ಮಾತಾಡಿದ್ದರಾ ಇವರು ಕೇವಲ ಹೈಕಮಾಂಡ್ ಗುಲಾಮಗಿರಿ ಮಾಡಿದ್ದಾರೆ ಬಿಟ್ರೆ ಯಾರಿಗೆ ಉಪಕಾರ ಮಾಡಿದ್ದಾರೆ ಎಲ್ಲಿ ನಮ್ಮ ಸಮುದಾಯದ ನಾಯಕರನ್ನು ಬೆಳೆಸಿದ್ದಾರೆ.
ಇವರು ರಾಮನ ಹೆಸ್ರಲ್ಲಿ ಅಧಿಕಾರಕ್ಕೆ ಬಂದು ರಾಮನಿಗೆ ಮೋಸ ಮಾಡಿದ್ರು ಈಗ ಕೃಷ್ಣನ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಅದ್ರೆ ಇವರ ಯೋಜನೆ ಕೃಷ್ಣನಲ್ಲಿ ನಡೆಯುವುದಿಲ್ಲ ಕೃಷ್ಣ ಶಕುನಿಯನ್ನೇ ತಂತ್ರಗಾರಿಕೆಯಲ್ಲಿ ಬಿಟ್ಟಿಲ್ಲ ಇನ್ನು ಈ ಶಕುನಿಗಳನ್ನು ಬಿಡ್ತಾರಾ ಇವರನ್ನು ಸುದರ್ಶನ ಚಕ್ರದ ಮೂಲಕ ದ್ವoಸ ಮಾಡುತ್ತಾನೆ ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಸ್ತಾವನೆ ಮಾಡುತ್ತ ರಾಜ್ಯ ಸರಕಾರದ ಮೇಲೆ ಜೀರೋ ಬ್ಯಾಲೆನ್ಸ್ ಆರೋಪ ಮಾಡುವ ಬಿಜೆಪಿ ಶಾಸಕರೇ ತಾವುಗಳು ಜಿಲ್ಲೆಯ ಜೀರೋ ನಾಲೆಜ್ ಸಂಸದ, ಶಾಸಕರು ಗಳು, ಸುನೀಲ್ ಕುಮಾರ್ ಜೀರೋದೊಂದಿಗೆ ಜೋಳಿಗೆ ಬಂದ ನೀವು ಇಷ್ಟು ಆಸ್ತಿ ಸಂಪಾದಿಸಿದ್ದು ಎಲ್ಲಿಂದ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರಕಾರದಿಂದ ಪ್ರತಿ ತಿಂಗಳು ಭತ್ಯೆಗಳೊಂದಿಗೆ ಸುಮಾರು 3ಲಕ್ಷ ನಿಮಗೆ ಸಂಬಳ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು.
ತಮ್ಮ ಸರಕಾರ ಇದ್ದಾಗ 9/11ಸಮಸ್ಯೆ ಪರಿಹಾರ ಕಂಡು ಹುಡುಕಿದ್ದೀರಾ? ವಿದ್ಯುತ್ ಬೆಲೆ ಪಿತಾಮಹ ಎಂದು ಕರೆಸಿಕೊಳ್ಳುವ ನೀವು ಬೆಲೇಯೆರಿಕೆ ಮಾಡಿದ್ರೆ ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್ ಸರಕಾರ ಬಿಲ್ಲವ ಈಡಿಗ ಸಮಾಜದ ನಾರಾಯಣ ಗುರು ನಿಗಮ ಮಾಡಿ ಬಿಲ್ಲವ ಸಮುದಾಯದ ಉನ್ನತಿಗೆ ಕೆಲಸ ಮಾಡುತಿದ್ರೆ ಸಂಘ ಪರಿವಾರ ಹಾಗೂ ಬಿಜೆಪಿ ಅವರ ಕೈಗೆ ಕತ್ತಿ ಚೂರಿ ನೀಡಿದ್ದೆ ನಿಮ್ಮ ಸಾಧನೆ ಎಂದರು.
ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ 2ನೇ ಆಡಳಿತ ಭಾಷೆಯಾಗಿ ಘೋಷಣೆ, ಕರಾವಳಿ ಕರ್ನಾಟಕದ ಅಭಿವೃದ್ಧಿ, ಪ್ರವಾಸೋದ್ಯಮಕ್ಕಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನುದಾನ ಮುಖ್ಯಮಂತ್ರಿ ಯವರು ಘೋಷಣೆ ಮಾಡಿರುವುದು ಕಾಂಗ್ರೆಸ್ ಬದ್ಧತೆಯನ್ನು ಸಾಬೀತುಪಡಿಸಿದೆ. ಕಳೆದ 3 ವರ್ಷದ ಅವಧಿಯಲ್ಲಿ ಕಾರ್ಕಳ ತಾಲೂಕಿನಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಗಳಿಗಾಗಿ ಸುಮಾರು 600 ಕೋಟಿ ವ್ಯಹಿಸಲಾಗಿದೆ ಆದರೆ ಕೇಂದ್ರ ಸರಕಾರದ ಹಲವಾರು ಜನವಿರೋಧಿ ನೀತಿ ಗಳು, ಬೆಲೆಯೇರಿಕೆ, ತೆರಿಗೆಯಿಂದಗಿ ಜನ ಕಂಗಾ ಲಗಿದ್ದಾರೆ. ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿ ಜನಪರ ಕೆಲಸಗಳನ್ನು ಮಾಡುತ್ತಿದೆ. ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಆದಂಥಹ ಅನಾಚಾರ ಕಾರ್ಕಳಕ್ಕೆ ಮಾಡಿದ ಅಪಚಾರವಾಗಿದೆ. ಬಿ ಜೆ ಪಿ ಏನಾದರೂ ಕಾರ್ಕಳಕ್ಕೆ ಮಾಡಿದ ಶಾಶ್ವತವಾದ ಹೆಜ್ಜೆ ಗುರುತಿದ್ದರೆ ತಿಳಿಸಿ ಎಂದ ಅವರು ನಿಟ್ಟೆ, ಹೆಬ್ರಿ ಬಹುಗ್ರಾಮ ಯೋಜನೆ, ನಿಟ್ಟೆ ಜವಳಿ ಪಾರ್ಕ್, ನಿಟ್ಟೆ ಹಲಸು ಕ್ಲಸ್ಟರ್ ಗಳು ಬಿ ಜೆ ಪಿ ಅಕ್ರಮ ವ್ಯವಹಾರಗಳ ಜ್ವಲoತ ಉದಾಹರಣೆಯಾಗಿದೆ ಎಂದರು.
ಕಾಂಗ್ರೆಸ್ ರಾಜ್ಯ ವಕ್ತರ ಸುಧೀರ್ ಕುಮಾರ್ ಮರೋಳಿ, ಪ್ರವೀಣ್ ಶೆಟ್ಟಿ ರೆಂಜಾಳ, ನ್ಯಾಯವಾದಿ ಶೇಖರ್ ಮಡಿವಾಳ ಬಿಜೆಪಿ ನಾಯಕರು ಹಾಗೂ ಜಿಲ್ಲೆಯ ಶಾಸಕ, ಸಂಸದರ ವೈಫಲ್ಯಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್, ನಾರಾಯಣ ಗುರು ನಿಗಮ ಮಂಜುನಾಥ ಪೂಜಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಮಾಳ , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಕ್ ಶಬ್ಬೀರ್ ಮಿಯ್ಯಾರು ಸುಧಾಕರ್ ಕೋಟ್ಯಾನ್, ಸದಾಶಿವ ದೇವಾಡಿಗ, ಸುಪ್ರೀತ್ ಶೆಟ್ಟಿ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.