ಶಮ್ಮಾಝ್ 

ಮಂಗಳೂರು: ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿಯ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಹಳೆಯಂಗಡಿ ಸಾಗು ನಿವಾಸಿ ಮುಹಮ್ಮದ್ ಶಮ್ಮಾಝ್ (16) ಶನಿವಾರ ತಡರಾತ್ರಿ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಶಮ್ಮಾಝ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಾಲ್ವರು ವಿದ್ಯಾರ್ಥಿಗಳಿಗೆ ಗಾಯ :

ಈ ಘಟನೆಯಲ್ಲಿ ಸುರತ್ಕಲ್ ಸೂರಿಂಜೆ ನಿವಾಸಿ ಮುಹಮ್ಮದ್ ಶನಾನ್ ಅಹ್ಮದ್ (18), ಅಡ್ಯಾರ್‌ನ ಹನೀಫ್ (23), ಕಾವೂರಿನ ದಾವೂದ್ ಫರ್ಸಿನ್ ಅಹ್ಮದ್ (18) ಹಾಗೂ ಕಸ್ಟಾ ಬೆಂಗ್ರೆಯ ಮುಹಮ್ಮದ್ ಶಾಕೀಲ್ ಹುಸೈನ್ (18) ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹಳೆಯಂಗಡಿ ಸಾಗು ನಿವಾಸಿಗಳಾದ ಇಲ್ಯಾಸ್ ಮತ್ತು ಶಹನಾಝ್ ದಂಪತಿಯ ಇಬ್ಬರು ಮಕ್ಕಳಲ್ಲಿ ಶಮ್ಮಾಝ್ ಎರಡನೇಯವರಾಗಿದ್ದರು. ಅವರು ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದರು. 

ಶಮ್ಮಾಝ್ ಅವರ ಮೃತದೇಹವನ್ನು ತಡರಾತ್ರಿ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಜೆಪ್ಪುವಿನಲ್ಲಿರುವ ಮನೆಗೆ ತರಲಾಗಿದ್ದು, ಝೀನತ್ ಬಕ್ಷ್ ಮಸೀದಿಯ ಖಬರ್‌ಸ್ತಾನದಲ್ಲಿ ಅಂತಿಮ ವಿಧಿವಿಧಾನ ನಡೆದವು ಎಂದು ಶಮ್ಮಾಝ್ ಅವರ ಮಾವ ಹನೀಫ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor