ಪುಂಜಾಲಕಟ್ಟೆ: ಬದ್ರಿಯಾ ಜುಮಾ ಮಸೀದಿಯಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್
Update: 2026-07-10 12:40 IST
ಪುಂಜಾಲಕಟ್ಟೆ: ಬದ್ರಿಯಾ ಜುಮಾ ಮಸೀದಿಯಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಗುರುವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂಸುಫ್ ಹಾಜಿ ಮೂರ್ಜೆ ವಹಿಸಿದ್ದರು. ಸ್ಥಳೀಯ ಖತೀಬರಾದ ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು.
ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಿದ ಅಲ್ ಹಾಜ್ ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರು ದುಆ ನೇರವೇರಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ, ಅಬ್ದುಲ್ ಸಲಾಂ ತಂಙಳ್, ಅಬ್ದುಲ್ ಸಮದ್ ಇಮ್ದಾದಿ, ಅಬ್ದುಲ್ ರಾಝಿ ಯಮಾನಿ, ನಝೀರ್ ಮದನಿ, ಹಾಜಿ ಉಮರಬ್ಬ ಮಂಜಲ್ ಪಲ್ಕೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಲತೀಫ್ ಪುಂಜಾಲಕಟ್ಟೆ ಸ್ವಾಗತಿಸಿ ನಿರೂಪಿಸಿದರು.