ಸ್ಪರ್ಶ್ -2025 : ಪ್ರೆಸಿಡೆನ್ಸಿ ಸ್ಕೂಲ್ ಚಾಂಪಿಯನ್
ಮಂಗಳೂರು: ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್ ಶಾಲಾ ಸಂಸ್ಕೃತಿ ಕ ಸ್ಪರ್ಧಾ ಉತ್ಸವ ಸ್ಪರ್ಶ್ -2025ರಲ್ಲಿ ಪ್ರೆಸಿಡೆನ್ಸಿ ಶಾಲೆ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದೆ.
ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳಾದ ಸಂವಿಶ್ ಎಂ ಪೂಜಾರಿ ಮತ್ತು ಅಭಯ್ ಅಲೋಶಿಯಸ್ ಲೋಬೊ ವಿಜ್ಞಾನ ಮಾದರಿ ಪ್ರಥಮ ಸ್ಥಾನ, ಸಂವಿಶ್ ಎಂ ಪೂಜಾರಿ & ಕೌಶಿಕ್ ಎನ್ ಖಾರ್ವಿ ಫ್ಯೂಷನ್ ಸಿಂಗಿಂಗ್ ಪ್ರಥಮ ಸ್ಥಾನ, ಸಂವಿಶ್ ಎಂ ಪೂಜಾರಿ & ಖಿದಾಶ್ ಅಬ್ದುಲ್ಲಾ ಪೋಸ್ಟರ್ ತಯಾರಿಕೆ ಪ್ರಥಮ ಸ್ಥಾನ, ಅಭಯ್ ಅಲೋಶಿಯಸ್ ಲೋಬೊ ಸಾರ್ವಜನಿಕ ಭಾಷಣ ದ್ವಿತೀಯ ಸ್ಥಾನ, ಅಭಯ್ ಅಲೋಶಿಯಸ್ ಲೋಬೋ & ಕೌಶಿಕ್ ಎನ್ ಖಾರ್ವಿ ಪವರ್‌ಪಾಯಿಂಟ್ ಪ್ರಸ್ತುತಿ ದ್ವಿತೀಯ ಸ್ಥಾನ, ಕಿಯಾರಾ ಶೀಲಾ ಪಿಂಟೋ ಫ್ಯೂಷನ್ ಸಿಂಗಿಂಗ್ ದ್ವಿತೀಯ ಸ್ಥಾನ, ಸುಜಲ್ ಜೀನ್ ಪಿಂಟೋ, ಕ್ಯಾನ್ವಾಸ್ ಚಿತ್ರಕಲೆ ತ್ರಿತೀಯ ಸ್ಥಾನವನ್ನು ಪಡೆದಿದ್ದಾರೆ.
ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಸಂಚಾಲಕ ಸತೀಶ್ ಭಟ್, ಪ್ರೆಸಿಡೆನ್ಸಿ ಶಾಲೆ ಯ ಪ್ರಾಂಶುಪಾಲರಾದ ಶೈಲಾ ಸಾಲ್ದಾನ, ಕಲಾ ಶಿಕ್ಷಕರಾದ ಝುಬೇರ್ ಖಾನ್ ಕುಡ್ಲ ಉಪಸ್ಥಿತರಿದ್ದರು.