ಮಹಮ್ಮದ್ ಅಝ್ಮಲ್
ಬಂಟ್ವಾಳ : ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ಅವರ ಪುತ್ರ ಮಹಮ್ಮದ್ ಅಝ್ಮಲ್ (25) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅ 29 ರಂದು ನಿಧನರಾದರು.
ಸತ್ತಾರ್ ಅವರ ಪತ್ನಿ ಸಹಿತ ಇಬ್ಬರು ಮಕ್ಕಳು ಕೂಡಾ ಭಿನ್ನಚೇತನರಾಗಿದ್ದು, ಇಬ್ಬರು ಮಕ್ಕಳ ಪೈಕಿ ಅಝ್ಮಲ್ ಎರಡನೇಯವನಾಗಿದ್ದು, ಗುರುವಾರ ಬೆಳಿಗ್ಗೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗುರುವಾರ ಅಪರಾಹ್ನ ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ಮಸೀದಿಯಲ್ಲಿ ಮೃತದೇಹದ ದಫನ ಕಾರ್ಯ ನೆರವೇರಿಸಲಾಗಿದೆ.
ಮೃತರ ಮನೆಗೆ ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.