ಶೇಖಬ್ಬ ಮುಸ್ಲಿಯಾರ್

Update: 2024-04-20 15:01 GMT

ಮಂಗಳೂರು : ನಗರದ ಬಂದರ್ ಕಂದಕ್‌ನ ಬದ್ರಿಯಾ ಜುಮಾ ಮಸ್ಜಿದ್‌ನ ಮಾಜಿ ಖತೀಬ್ ಶೇಖಬ್ಬ ಮುಸ್ಲಿಯಾರ್ (74) ಶನಿವಾರ ಬೆಳಗ್ಗೆ ತನ್ನ ಸ್ವಗೃಹದಲ್ಲಿ ನಿಧನರಾದರು.

ಪತ್ನಿ, ಒಬ್ಬ ಪುತ್ರ ಮತ್ತು ಆರು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಸಜಿಪನಡು ಗ್ರಾಮದ ನಿವಾಸಿಯಾಗಿದ್ದ ಶೇಖಬ್ಬ ಮುಸ್ಲಿಯಾರ್ ಕಂದಕ್ ಬದ್ರಿಯಾ ಮಸೀದಿಯಲ್ಲಿ 15 ವರ್ಷ ಖತೀಬರಾಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ಬಂದರ್ ಅಲ್‌ಹಝ್ಝರಿಯಾದಲ್ಲಿ 22 ವರ್ಷ ಸದರ್ ಮುಅಲ್ಲಿಮರಾಗಿದ್ದರು.

*ಕಂದಕ್ ಮುಸ್ಲಿಂ ಜಮಾಅತ್‌ನ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾರ್ಪೊರೇಟರ್ ಲತೀಫ್ ಕಂದಕ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ