×
Ad

ದುಬೈ: 'ಬದ್ರಿಯಾ ಫ್ರೆಂಡ್ಸ್ ಯುಎಇ' ವತಿಯಿಂದ ರಕ್ತದಾನ ಶಿಬಿರ

Update: 2026-06-23 20:28 IST

ದುಬೈ: 'ಬದ್ರಿಯಾ ಫ್ರೆಂಡ್ಸ್ ಯುಎಇ' ವತಿಯಿಂದ ರವಿವಾರ ದುಬೈನ ಜದಾಫ್‌ನಲ್ಲಿರುವ ಬ್ಲಡ್ ಡೊನೇಷನ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ ಹಲವಾರು ಮಂದಿ ರಕ್ತದಾನ ಮಾಡಿದ್ದು, ರಕ್ತದಾನ ಮಾಡಿದ ದಾನಿಗಳಿಗೆ 'ಬದ್ರಿಯಾ ಫ್ರೆಂಡ್ಸ್ ಯುಎಇ' ಯಿಂದ ಪ್ರಮಾಣ ಪತ್ರ ನೀಡಲಾಯಿತು.

ಯುಎಇಯಲ್ಲಿ ಕ್ರೀಡೆ ಹಾಗು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿ ರುವ 'ಬದ್ರಿಯಾ ಫ್ರೆಂಡ್ಸ್ ಯುಎಇ' ಹಲವಾರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಮಾಡುತ್ತಾ ಬಂದಿದೆ.

ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಮಹಮ್ಮದ್ ಆಶಿಕ್, ಅನ್ವರ್ ಸಾದತ್ ಬಿಕರ್ನಕಟ್ಟೆ, SK ಶಮೀರ್, ಮೊಹಮ್ಮದ್ ಆಸಿಫ್ ಬೆಂಗೆರೆ, ಅಲ್ತಾಫ್ ಬಿಕರ್ನಕಟ್ಟೆ, ಅಕ್ಬರ್ ಸೇರಿದಂತೆ ಮತ್ತಿತರರು ಹಾಜರಿದ್ದರು. 





 


 


 


 


 


 


 


 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News