ಹಾಸನ: ಸಕಲೇಶಪುರ ವಲಯ ಅರಣ್ಯಾಧಿಕಾರಿ (RFO) ಹೇಮಂತ್ ಕುಮಾರ್ ಅವರ ಹಾಸನ ನಗರದ ಚಿಕ್ಕಹೊನ್ನೇನಹಳ್ಳಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಮನೆಯಲ್ಲಿದ್ದ ಬಾಲಕನನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಕುಟುಂಬ ಸದಸ್ಯರು ಹಣ ಸಾಗಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಅನುಮಾನಗೊಂಡ ಲೋಕಾಯುಕ್ತ ಸಿಬ್ಬಂದಿ ಮನೆಯ ಬಾಗಿಲಲ್ಲೇ ಕುಳಿತು ಬಾಲಕನ ಶಾಲಾ ಬ್ಯಾಗ್ ಮತ್ತು ಪ್ಯಾಂಟ್ ಜೇಬನ್ನು ಪರಿಶೀಲಿಸಿದಾಗ 500 ರೂ. ಮುಖಬೆಲೆಯ ಒಂದು ಕಂತೆ ಹಣ ಪತ್ತೆಯಾಗಿದೆ. ಈ ಘಟನೆಯಿಂದ ತೀವ್ರ ಅಸಮಾಧಾನ ಹೊರಹಾಕಿದ ಅಧಿಕಾರಿಗಳು, ನಮಗೆ ಸರಿಯಾಗಿ ತಪಾಸಣೆ ಮಾಡಲು ಅವಕಾಶ ಕೊಡಿ ಎಂದು ಕುಟುಂಬಸ್ಥರಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಮಲ್ನಾಡ್ ಮೆಹಬೂಬ್/ವಾರ್ತಾಭಾರತಿ

ಹಾಸನ ಜಿಲ್ಲಾ ವರದಿಗಾರರು

ಮಲ್ನಾಡ್ ಮೆಹಬೂಬ್ ಅವರು ಕಳೆದ 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಹಾಸನ ಜಿಲ್ಲೆಯಲ್ಲಿ ವಾರ್ತಾಭಾರತಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.