×
Ad

ಕೆಇಎ: ಕನ್ನಡ ಕಡ್ಡಾಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ

Update: 2024-09-21 23:51 IST

ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ವಿವಿಧ ಹುದ್ದೆಗಳಿಗೆ ಸೆ.29ಕ್ಕೆ ಕಡ್ಡಾಯ ಕನ್ನಡ ಪರೀಕ್ಷೆ ಇದ್ದು, ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‍ಸೈಟ್‍ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಎರಡೂ ಇಲಾಖೆಗಳ ಈ ಹುದ್ದೆಗಳಿಗೆ ಕೆಲವರು ಪ್ರತ್ಯೇಕವಾಗಿಯೇ ಅರ್ಜಿ ಸಲ್ಲಿಸಿರುವ ಕಾರಣ ಅಂತಹವರಿಗೆ ಎರಡೆರಡು ಕೇಂದ್ರಗಳ ಪ್ರತ್ಯೇಕ ಪ್ರವೇಶ ಪತ್ರಗಳು ಡೌನ್‍ಲೋಡ್ ಆಗುತ್ತಿವೆ. ಆದರೆ ಅಭ್ಯರ್ಥಿಗಳು ಯಾವುದಾದರು ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆದರೆ ಸಾಕು ಎಂದಿದ್ದಾರೆ.

ಪರೀಕ್ಷೆ ನಂತರ ಎರಡೂ ಪ್ರವೇಶ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಕೆಇಎಗೆ ಅಂಚೆ ಅಥವಾ ಖುದ್ದಾಗಿ ತಲುಪಿಸಬೇಕು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News