ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸ್ಟಾಫ್ ಸೆಲೆಕ್ಷನ್ ಕಮಿಷನ್
ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಹತ್ತನೇ ತರಗತಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಈ ಬಾರಿ ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಸಿಆರ್‌ಪಿಎಫ್, ಎನ್‌ಸಿಬಿ, ಎಸ್‌ಎಸ್‌ಎಫ್, ಅಸ್ಸಾಂ ರೈಫಲ್ಸ್‌ನಲ್ಲಿ ಎಸ್‌ಎಸ್‌ಸಿ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ 01 ಡಿಸೆಂಬರ್ 2025 ರಂದು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 25,487 ಹುದ್ದೆಗಳನ್ನು ನೇಮಕಾತಿಗಾಗಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ನೇಮಕಾತಿ 2025ಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 01, 2025 ರಿಂದ ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು ಡಿಸೆಂಬರ್ 31, 2025 ರವರೆಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ನೇಮಕಾತಿ 2025ರ ಸಂಪೂರ್ಣ ವಿವರಗಳನ್ನು ಈ ಕೆಳಗೆ ಪರಿಶೀಲಿಸಬಹುದು.
ಪ್ರಮುಖ ವಿವರಗಳು
• ಅಧಿಸೂಚನೆ ಹೊರಡಿಸಿದ ದಿನಾಂಕ: 01 ಡಿಸೆಂಬರ್ 2025
• ಅರ್ಜಿ ಸಲ್ಲಿಕೆ ಆರಂಭ: 01 ಡಿಸೆಂಬರ್ 2025
• ಕೊನೆಯ ದಿನಾಂಕ: 31 ಡಿಸೆಂಬರ್ 2025
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 01 ಜನವರಿ 2026
• ತಿದ್ದುಪಡಿಗೆ ಕೊನೆಯ ದಿನಾಂಕ: 08 ಜನವರಿ 2026 ಯಿಂದ 10 ಜನವರಿ 2026
• ಪೂರ್ವಪರೀಕ್ಷೆ ದಿನಾಂಕ: ಫೆಬ್ರವರಿ – ಏಪ್ರಿಲ್ 2026
• ದಾಖಲಾತಿ ಕಾರ್ಡ್: ಪರೀಕ್ಷೆಗೆ ಮೊದಲು
ಅರ್ಜಿ ಶುಲ್ಕ
ಜನರಲ್, ಇಡಬ್ಲ್ಯುಎಸ್, ಒಬಿಸಿಗಳಿಗೆ ಅರ್ಜಿ ಶುಲ್ಕ ರೂ 100/- ಮತ್ತು ಎಸ್ಸಿ ಎಸ್ಟಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ತಿದ್ದುಪಡಿ ಶುಲ್ಕ ಮೊದಲ ಬಾರಿಗೆ ರೂ 200/- ಆಗಿದ್ದರೆ, ಎರಡನೇ ಬಾರಿಗೆ ರೂ 500/- ಆಗಿರುತ್ತದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್/ ಯುಪಿಐ ಮತ್ತು ಇತರ ಶುಲ್ಕ ಪಾವತಿ ವಿಧಾನಗಳಿಂದ ಪಾವತಿಸಬಹುದಾಗಿದೆ.
ವಯೋಮಿತಿ
01 ಜನವರಿ 2026ರೊಳಗೆ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 23 ವರ್ಷಗಳು.
ಎಷ್ಟು ಹುದ್ದೆಗಳು?
ಎಸ್ಎಸ್ಜಿ ಜಿಡಿ ನೇಮಕಾತಿ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಒಟ್ಟು 25,487 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಜನರಲ್ ವಿಭಾಗದ ಪುರುಷರಿಗೆ 10,198 ಹುದ್ದೆಗಳು, ಮಹಿಳೆಯರಿಗೆ 904 ಹುದ್ದೆಗಳು ಖಾಲಿ ಇವೆ. ಇಡಬ್ಲ್ಯುಎಸ್ ಪುರುಷರಿಗೆ 2,416 ಮತ್ತು ಮಹಿಳೆಯರಿಗೆ 189 ಹುದ್ದೆಗಳು ಮಿಸಲಾಗಿವೆ. ಒಬಿಸಿಗೆ ಪುರುಷರಿಗೆ 5329 ಮತ್ತು ಮಹಿಳೆಯರಿಗೆ 436 ಹುದ್ದೆಗಳು, ಪರಿಶಿಷ್ಟ ಜಾತಿಗಳ ಪುರುಷರಿಗೆ 3,423 ಮತ್ತು ಮಹಿಳೆಯರಿಗೆ 269, ಪರಿಶಿಷ್ಟ ಪಂಗಡದ ಪುರುಷರಿಗೆ 2,091 ಮತ್ತು ಮಹಿಳೆಯರಿಗೆ 222 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ:
ಹೆಚ್ಚಿನ ಮಾಹಿತಿಗಳಿಗೆ https://www.sarkariexam.com/ssc-gd-constable-recruitment-2026/ ಲಿಂಕ್ಗೆ ಭೇಟಿ ಕೊಡಬಹುದು. ಅಥವಾ https://www.sarkariexam.com/ ವೆಬ್ತಾಣಕ್ಕೆ ಭೇಟಿಕೊಡಬಹುದು.