ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅವಕಾಶ; ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕರ್ನಾಟಕ (NRLM–ಸಂಜೀವಿನಿ) ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://jobsksrlps.karnataka.gov.in/

►ಪ್ರಮುಖ ದಿನಾಂಕಗಳು

• ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 30 ಅಕ್ಟೋಬರ್ 2026

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ನವೆಂಬರ್ 2026

►ಪ್ರಮುಖ ಮಾಹಿತಿ

• ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘ (KSRLPS–ಸಂಜೀವಿನಿ)

• ಒಟ್ಟು ಖಾಲಿ ಹುದ್ದೆಗಳು: 32

• ಹುದ್ದೆಗಳ ಹೆಸರು: DEO/MIS ಸಂಯೋಜಕರು, ಬ್ಲಾಕ್ ಮ್ಯಾನೇಜರ್, ಕಚೇರಿ ಸಹಾಯಕರು, ಕ್ಲಸ್ಟರ್ ಮೇಲ್ವಿಚಾರಕರು ಮತ್ತು ಇತರ ಹುದ್ದೆಗಳು

• ವೇತನ ಶ್ರೇಣಿ: ತಿಂಗಳಿಗೆ 18,000 ರೂ.ಗಳಿಂದ 42,000 ರೂ.ವರೆಗೆ

• ಉದ್ಯೋಗ ಸ್ಥಳ: ಮೈಸೂರು ಜಿಲ್ಲೆ, ಕರ್ನಾಟಕ

►ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ (PG), B.Sc, M.Sc, MBA/PGDM, MSW, ಡಿಪ್ಲೊಮಾ ಅಥವಾ PG ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಅಗತ್ಯವಿರುತ್ತದೆ.

- ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 50 ವರ್ಷ.

ಅರ್ಜಿ ಶುಲ್ಕ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ಅರ್ಜಿ ಶುಲ್ಕ ಪಾವತಿಸಬೇಕು.

►ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

• ಮೊದಲು ಅಧಿಕೃತ ವೆಬ್ಸೈಟ್ jobsksrlps.karnataka.gov.in ಗೆ ಭೇಟಿ ನೀಡಿ.

• ಮುಖಪುಟದಲ್ಲಿ 'Careers' ವಿಭಾಗವನ್ನು ಆಯ್ಕೆಮಾಡಿ.

• 2026ರ ಅಕ್ಟೋಬರ್ 30ರಂದು ಪ್ರಕಟಿಸಿರುವ ಮೈಸೂರು ಜಿಲ್ಲಾ ನೇಮಕಾತಿ ಅಧಿಸೂಚನೆಯನ್ನು ಆಯ್ಕೆಮಾಡಿ.

• ನೀವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯ ಅರ್ಹತೆ, ವೇತನ ಮತ್ತು ನಿಬಂಧನೆಗಳನ್ನು ಪರಿಶೀಲಿಸಿ.

• ಹೊಸ ಅಭ್ಯರ್ಥಿಗಳಾಗಿದ್ದರೆ 'Sign In / Create Account' ಆಯ್ಕೆಯನ್ನು ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ.

• ವೈಯಕ್ತಿಕ, ಶೈಕ್ಷಣಿಕ ಹಾಗೂ ಅನುಭವದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

• ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ನಮೂದಿಸಿರುವ ಎಲ್ಲ ವಿವರಗಳನ್ನು ಮರುಪರಿಶೀಲಿಸಿ.

• 2026ರ ನವೆಂಬರ್ 12ರೊಳಗೆ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ. ಬಳಿಕ ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor